ADVERTISEMENT

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ಪ್ರಕಟ

ಪರೀಕ್ಷೆ ಬರೆದಿದ್ದರು 16 ಲಕ್ಷ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 29 ಮೇ 2018, 8:36 IST
Last Updated 29 ಮೇ 2018, 8:36 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಸಿಬಿಎಸ್‌ಇ (ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜ್ಯುಕೇಶನ್) 10ನೇ ತರಗತಿ ಫಲಿತಾಂಶ ಮಂಗಳವಾರ ಮಧ್ಯಾಹ್ನವೇ ಪ್ರಕಟವಾಗಿದೆ. ಈ ಮೊದಲು ಫಲಿತಾಂಶವನ್ನು ಸಂಜೆ 4 ಗಂಟೆಗೆ ಪ್ರಕಟಿಸಲಾಗುವುದು ಎಂದು ಸಿಬಿಎಸ್‌ಇ ಹೇಳಿತ್ತು.

ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಸಿಬಿಎಸ್‌ಇ ಮಂಡಳಿಯ ವೆಬ್‌ಸೈಟ್ www.cbse.nic.in ಜಾಲತಾಣದಲ್ಲಿ ಫಲಿತಾಂಶ ನೋಡಿಕೊಳ್ಳಬಹುದು.

ಎನ್‌ಐಸಿ (ನ್ಯಾಷನಲ್ ಇನ್‌ಫರ್ಮೇಶನ್ ಸೆಂಟರ್) ಸಹ ಫಲಿತಾಂಶವನ್ನು www.cbseresults.nic.in ಜಾಲತಾಣದಲ್ಲಿ ಪ್ರಕಟಿಸಿದೆ.
ದೂರವಾಣಿ ಸಂಖ್ಯೆ 011 - 24300699 ಕರೆ ಮಾಡುವ ಮೂಲಕ ಅಥವಾ 7738299899 ಸಂಖ್ಯೆಗೆ ಎಸ್‌ಎಂಎಸ್ ಕಳಿಸುವ ಮೂಲಕವೂ ಫಲಿತಾಂಶ ತಿಳಿದುಕೊಳ್ಳಬಹುದಾಗಿದೆ.

ADVERTISEMENT

ಈ ವರ್ಷ ಒಟ್ಟು 16 ಲಕ್ಷ ವಿದ್ಯಾರ್ಥಿಗಳು 10ನೇ ತರಗತಿ ಪರೀಕ್ಷೆ ಬರೆದಿದ್ದರು. ದೆಹಲಿ ಮತ್ತು ಜಾರ್ಖಂಡ್‌ಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ದೇಶದಾದ್ಯಂತ ದೊಡ್ಡ ಸುದ್ದಿಯಾಗಿತ್ತು. ‘ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಗಣಿತದ ಮರುಪರೀಕ್ಷೆ ನಡೆಸುವುದಿಲ್ಲ’ ಎಂದು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಘೋಷಿಸಿತ್ತು.

ಸಿಬಿಎಸ್‌ಇ ಮಂಡಳಿಯು ಸಿಸಿಇ (ಕಂಟಿನ್ಯೂಯಸ್ ಕಾಂಪ್ರಹೆನ್ಸಿವ್ ಎವಾಲ್ಯುಯೇಷನ್) ವಿಧಾನವನ್ನು ಹಿಂಪಡೆದ ನಂತರ ನಡೆದ ಮೊದಲ ಸಾರ್ವತ್ರಿಕ ಪರೀಕ್ಷೆ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.