ADVERTISEMENT

ಸಿಬಿಐನಿಂದ ಕಲ್ಮಾಡಿ ತನಿಖೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2013, 19:59 IST
Last Updated 6 ಜೂನ್ 2013, 19:59 IST

ನವದೆಹಲಿ(ಪಿಟಿಐ):  ಕಾಮನ್‌ವೆಲ್ತ್ ಕ್ರೀಡಾಕೂಟ (ಸಿಡಬ್ಲುಜಿ)ಆಯೋಜನೆಯಲ್ಲಿ ಮಾರಿಷಸ್ ಮೂಲದ ಕಂಪೆನಿಗೆ ರೂ 70 ಕೋಟಿ  ಮೊತ್ತದ ಗುತ್ತಿಗೆ ನೀಡುವಲ್ಲಿ ನಡೆದಿರುವ ಅವ್ಯವಹಾರ ಕುರಿತು ಗುರುವಾರ ಸಿಡಬ್ಲುಜೆ ಆಯೋಜಕ ಸಮಿತಿಯ ಮಾಜಿ ಮುಖ್ಯಸ್ಥ ಸುರೇಶ್ ಕಲ್ಮಾಡಿ ಅವರನ್ನು ಗುರುವಾರ ಸಿಬಿಐ ತನಿಖೆಗೆ ಒಳಪಡಿಸಿತ್ತು. ಸಿಬಿಐ ಅಧಿಕಾರಿಗಳು ಕಲ್ಮಾಡಿಯವರನ್ನು 3 ಗಂಟೆ ಕಾಲ ಪ್ರಶ್ನಿಸಿದರು. ಗುತ್ತಿಗೆಗಾಗಿ ಮಾರಿಷಸ್ ಕಂಪೆನಿಯನ್ನು ಆಯ್ಕೆ ಮಾಡಿದ ಕಾರಣಗಳ ಕುರಿತೂ ಅಧಿಕಾರಿಗಳು ಪ್ರಶ್ನಿಸಿರುವುದಾಗಿ ಮೂಲಗಳು ತಿಳಿಸಿವೆ.

ಗುತ್ತಿಗೆಗಳಲ್ಲಿನ ಅವ್ಯವಹಾರದ ತನಿಖೆಗಾಗಿ ನಿವೃತ್ತ ಮಹಾಲೇಖಪಾಲರಾದ ವಿ.ಕೆ.ಶುಂಗ್ಲು ನೇತೃತ್ವದ ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.