ADVERTISEMENT

ಸಿಸೋಡಿಯಾ ನಿವಾಸಕ್ಕೆ ಸಿಬಿಐ ಅಧಿಕಾರಿಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2017, 20:04 IST
Last Updated 16 ಜೂನ್ 2017, 20:04 IST
ಸಿಸೋಡಿಯಾ ನಿವಾಸಕ್ಕೆ ಸಿಬಿಐ ಅಧಿಕಾರಿಗಳ ಭೇಟಿ
ಸಿಸೋಡಿಯಾ ನಿವಾಸಕ್ಕೆ ಸಿಬಿಐ ಅಧಿಕಾರಿಗಳ ಭೇಟಿ   

ನವದೆಹಲಿ: ಆಮ್‌ ಆದ್ಮಿ ಸರ್ಕಾರದ ‘ಟಾಕ್‌ ಟು ಎಕೆ’ (ಟಾಕ್‌ ಟು ಅರವಿಂದ್‌ ಕೇಜ್ರಿವಾಲ್‌) ಸಾಮಾಜಿಕ ಜಾಲತಾಣಗಳ ಪ್ರಚಾರ ಆಂದೋಲನದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ  ಶುಕ್ರವಾರ  ಸಿಬಿಐ ಅಧಿಕಾರಿಗಳ ತಂಡವು  ದೆಹಲಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರಿಂದ  ಹೇಳಿಕೆ ಪಡೆದುಕೊಂಡಿತು.

ದೆಹಲಿ ಜಾಗೃತ ದಳವು ನೀಡಿದ ದೂರಿನ ಮೇಲೆ ಸಿಬಿಐ ಅಧಿಕಾರಿಗಳು ಕಳೆದ ಜನವರಿಯಲ್ಲಿ ಎಫ್‌ಐಆರ್‌ ದಾಖಲಿಸಿತ್ತು.

ಸಿಸೋಡಿಯಾ ಮನೆ ಮೇಲೆ ದಾಳಿ ನಡೆದಿದೆ ಎಂಬ ಊಹಾಪೋಹಳಿಗೆ ಸ್ಪಷ್ಟನೆ ನೀಡಿದ ಸಿಬಿಐ ಅಧಿಕಾರಿಗಳು, “ಯಾವುದೇ ಹುಡುಕಾಟ, ಅಥವಾ ದಾಳಿ ನಡೆಸಿಲ್ಲ. ಕೆಲ ಸ್ಪಷ್ಟನೆ ಪಡೆಯುವುದಕ್ಕಾಗಿ ಭೇಟಿ ನೀಡಿದ್ದೆವು’ ಎಂದು ತಿಳಿಸಿದ್ದಾರೆ.

ಟಾಕ್‌ ಟು ಎಕೆ ಪ್ರಚಾರ ಆಂದೋಲನಕ್ಕೆ ಸಲಹೆಗಾರರನ್ನು ನೇಮಿಸಿ, ₹1.5 ಕೋಟಿ ಪಾವತಿಸಲಾಗಿತ್ತು. ಇದಕ್ಕೆ ಪ್ರಧಾನ ಕಾರ್ಯದರ್ಶಿಯವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.