ADVERTISEMENT

ಸುಬ್ರಮಣಿಯನ್ ಸ್ವಾಮಿ ನನ್ನ ಹೀರೋ: ಉಮಾ ಭಾರತಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2016, 11:36 IST
Last Updated 5 ಜೂನ್ 2016, 11:36 IST
ಉಮಾ ಭಾರತಿ
ಉಮಾ ಭಾರತಿ   

ನವದೆಹಲಿ (ಪಿಟಿಐ): ಅಯೋಧ್ಯೆ ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರ ಮಾತುಗಳ ಬಗ್ಗೆ ನನಗೆ ಸಂಪೂರ್ಣ ನಂಬಿಕೆಯಿದ್ದು, ಅವರೇ ನನ್ನ ಹೀರೋ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ ಹೇಳಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಸ್ವಾಮಿ ಅವರನ್ನು ನಾನು ತುಂಬಾ ಗೌರವಿಸುತ್ತೇನೆ. ಅವರು ನನ್ನ ಹೀರೋ. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ನನಗಾಗ 15 -16 ವರ್ಷವಾಗಿತ್ತು. ಅಂದು ಡಾ.ಸ್ವಾಮಿ ಮತ್ತು ಜಾರ್ಜ್ ಫರ್ನಾಂಡಿಸ್ ಅವರೆ ನನ್ನ ಹೀರೋಗಳಾಗಿದ್ದರು. ಸ್ವಾಮಿ ಅವರು ಏನೇ ಹೇಳಿದರೂ ಅವರ ಮಾತುಗಳನ್ನು ನಾನು ನಂಬುತ್ತೇನೆ ಎಂದಿದ್ದಾರೆ.

ಮುಂಬೈನಲ್ಲಿ ಏಪ್ರಿಲ್‍ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸ್ವಾಮಿ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಗಳು ಈ ವರ್ಷಾಂತ್ಯದಲ್ಲಿ ಆರಂಭವಾಗಲಿವೆ. ಮುಂದಿನ ವರ್ಷ ಎಲ್ಲಾ ಹಿಂದೂಗಳು ರಾಮ ನವಮಿಯನ್ನು ಆಯೋಧ್ಯೆಯಲ್ಲಿಯೇ ಆಚರಿಸಬಹುದು ಎಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.