ADVERTISEMENT

‘ಸೆಲ್ಫಿ ವಿತ್‌ ಡಾಟರ್‌’ ಆ್ಯಪ್‌ಗೆ ಚಾಲನೆ

ಪಿಟಿಐ
Published 9 ಜೂನ್ 2017, 19:30 IST
Last Updated 9 ಜೂನ್ 2017, 19:30 IST
‘ಸೆಲ್ಫಿ ವಿತ್‌ ಡಾಟರ್‌’ ಆ್ಯಪ್‌ಗೆ ಚಾಲನೆ
‘ಸೆಲ್ಫಿ ವಿತ್‌ ಡಾಟರ್‌’ ಆ್ಯಪ್‌ಗೆ ಚಾಲನೆ   

ನವದೆಹಲಿ: ಹೆಣ್ಣು ಭ್ರೂಣಹತ್ಯೆ ಮತ್ತು ಲಿಂಗ ತಾರತಮ್ಯ ಕುರಿತು ಜಾಗೃತಿ ಮೂಡಿಸಲು ‘ಸೆಲ್ಫಿ ವಿತ್‌ ಡಾಟರ್‌’ ಮೊಬೈಲ್‌ ಆ್ಯಪ್‌ಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಶುಕ್ರವಾರ ಚಾಲನೆ ನೀಡಿದರು.

ತಮ್ಮ ಮಗಳ ಜೊತೆ ಸೆಲ್ಫಿ ತೆಗೆದುಕೊಂಡು ಅಪ್‌ಲೋಡ್‌ ಮಾಡುವ ಮೂಲಕ ಆಂದೋಲನವನ್ನು ಯಶಸ್ವಿಗೊಳಿಸಬೇಕು ಎಂದು ಪ್ರಣವ್‌ ಅವರು ಜನರಲ್ಲಿ ಮನವಿ ಮಾಡಿದರು.

ಹೆಣ್ಣು ಭ್ರೂಣಹತ್ಯೆ ಮತ್ತು ಲಿಂಗ ತಾರತಮ್ಯದ ವಿರುದ್ಧ ‘ಸೆಲ್ಫಿ ವಿತ್‌ ಡಾಟರ್‌’ ಆಂದೋಲನ ವಿಶ್ವದಾದ್ಯಂತ ವಿಸ್ತರಿಸಲಿದೆ ಎಂದು ಅಭಿಪ್ರಾಯಪಟ್ಟರು.

ADVERTISEMENT

ಮಹಿಳಾ ಸಬಲೀಕರಣ ಮತ್ತು ಗ್ರಾಮೀಣಾಭಿವೃದ್ಧಿಗಾಗಿ ಶ್ರಮಿಸುತ್ತಿರುವ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸುನಿಲ್‌ ಜಗಲನ್‌ ಎಂಬುವವರು ಹರಿಯಾಣದ ಜಿಂದ್‌ ಜಿಲ್ಲೆಯ ಬಿಬಿಪುರ ಗ್ರಾಮದಲ್ಲಿ 2015ರಂದು ಜಾಗೃತಿ ಆಂದೋಲನ ಆರಂಭಿಸಿದ್ದರು. ಆಂದೋಲನದ ಪರಿಣಾಮವಾಗಿ ಹರಿಯಾಣದಲ್ಲಿ ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.