ADVERTISEMENT

ಸೈನಿಕರ ಶೋಧ ಕಾರ್ಯಾಚರಣೆಗೆ ಹಿಮಪಾತ ಅಡ್ಡಿ

ಪಿಟಿಐ
Published 13 ಡಿಸೆಂಬರ್ 2017, 19:35 IST
Last Updated 13 ಡಿಸೆಂಬರ್ 2017, 19:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ನಾಪತ್ತೆಯಾಗಿರುವ ಐವರು ಸೈನಿಕರ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಭಾರಿ ಹಿಮಪಾತ ಮತ್ತು ಹವಾಮಾನ ವೈಪರೀತ್ಯ ಅಡ್ಡಿ ಮಾಡಿದೆ. ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿ ಸಂಭವಿಸಿದ ಭಾರಿ ಹಿಮಕುಸಿತದಲ್ಲಿ ಐವರು ಸೈನಿಕರು ನಾಪತ್ತೆಯಾಗಿದ್ದರು.

ಸೋಮವಾರ ತಡರಾತ್ರಿ ಉಂಟಾದ ಭಾರಿ ಹಿಮಕುಸಿತದಿಂದಾಗಿ ಕುಪ್ವಾರಾ ಜಿಲ್ಲೆಯ ನೌವ್ಗಾಮ್‌ ಪ್ರಾಂತ್ಯದ ಕಡಿದಾದ ಕಣಿವೆಯಲ್ಲಿ ಇಬ್ಬರು ಸೈನಿಕರು ಜಾರಿ ಬಿದ್ದಿದ್ದರು. ಗುರೆಝ್‌ ಕಣಿವೆಯ ಕಂಜಲ್‌ವಾನ್‌ ಉಪಪ್ರಾಂತ್ಯದಲ್ಲಿ ಮೂವರು ಸೈನಿಕರು ನಾಪತ್ತೆಯಾಗಿದ್ದರು.

‘ನೌವ್ಗಾಮ್‌ ಮತ್ತು ಗುರೆಝ್‌ ಕಣಿವೆಯಲ್ಲಿ ಮಂಗಳವಾರದಿಂದ ಶೋಧಕಾರ್ಯ ನಡೆಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.