ADVERTISEMENT

ಸ್ಮರಣ ಸಂಚಿಕೆಯಲ್ಲಿ ರಾಷ್ಟ್ರಗೀತೆ ವಿವಾದ

​ಪ್ರಜಾವಾಣಿ ವಾರ್ತೆ
Published 14 ಜೂನ್ 2017, 19:30 IST
Last Updated 14 ಜೂನ್ 2017, 19:30 IST
ಸ್ಮರಣ ಸಂಚಿಕೆಯಲ್ಲಿ ರಾಷ್ಟ್ರಗೀತೆ ವಿವಾದ
ಸ್ಮರಣ ಸಂಚಿಕೆಯಲ್ಲಿ ರಾಷ್ಟ್ರಗೀತೆ ವಿವಾದ   

ತಿರುವಂತಪುರ: ಕೇರಳದ ಕಣ್ಣೂರು ಜಿಲ್ಲೆಯ ಸರ್ಕಾರಿ ಕಾಲೇಜೊಂದು ವಿವಾದಕ್ಕೆ ಕಾರಣವಾಗಿದೆ. ಇಲ್ಲಿಯ ವಿದ್ಯಾರ್ಥಿಗಳು ಹೊರತಂದ ಸ್ಮರಣ ಸಂಚಿಕೆಯಲ್ಲಿ ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗಿದೆ ಎಂದು ವ್ಯಾಪಕ ಪ್ರತಿಭಟನೆ ನಡೆದಿದೆ.

ತಲಶ್ಶೇರಿಯ ಬ್ರೆನ್ನೆನ್‌ ಕಾಲೇಜಿನ 125ನೇ ವಾರ್ಷಿಕೋತ್ಸವದ ಅಂಗವಾಗಿ ವಿದ್ಯಾರ್ಥಿಗಳು ಹೊರತಂದಿರುವ ಸ್ಮರಣ ಸಂಚಿಕೆ ಇದಾಗಿದೆ. ಕಾಲೇಜಿನ ಎಸ್‌ಎಫ್‌ಐ ಈ ಸ್ಮರಣಸಂಚಿಕೆ ಹೊರತಂದಿದ್ದು ಅದಕ್ಕೆ ಕೆಎಸ್‌ಯು (ಕೇರಳ ವಿದ್ಯಾರ್ಥಿ ಒಕ್ಕೂಟ) ಮತ್ತು ಎಬಿವಿಪಿ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.

ಎರಡು ವಿವಾದಿತ ಪುಟಗಳನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯ ಹೇರಿವೆ. ಸ್ಮರಣಸಂಚಿಕೆಯಲ್ಲಿರುವ ನಾಲ್ಕು ಸಾಲಿನ ಪದ್ಯದಲ್ಲಿ ‘ದೇಶಭಕ್ತಿ ಎನ್ನುವುದು ಸಿನೆಮಾ ಸಭಾಂಗಣದ ಸೀಟನ್ನು ಬಿಟ್ಟು ಹೋಗಿದೆ’ ಮತ್ತು ‘ಮನುಸ್ಮೃತಿ ಓದುವ ದೇಶಭಕ್ತಿಯು ಬೀದಿಗಳಲ್ಲಿದೆ...’ ಎಂಬ ಸಾಲುಗಳು ಇದಾಗಿವೆ.

ADVERTISEMENT

ಈ ಹೇಳಿಕೆಗಳನ್ನು ಉದಾಹರಿಸುವ ಚಿತ್ರವೊಂದನ್ನು ಬಿಡಿಸಲಾಗಿದೆ. ಅದರಲ್ಲಿ  ಚಿತ್ರಮಂದಿರದ ಪರದೆಯ ಮೇಲೆ ರಾಷ್ಟ್ರಧ್ವಜ ಇದ್ದ ಸಂದರ್ಭದಲ್ಲಿ ದಂಪತಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವ ದೃಶ್ಯವಿದೆ.

‘ಇದರಲ್ಲಿ ಯಾವುದೇ ರೀತಿಯ ರಾಷ್ಟ್ರವಿರೋಧಿ ಅಂಶಗಳು ಇಲ್ಲ’ ಎಂದು ಸಹಾಯಕ ಉಪನ್ಯಾಸಕ ಕೆ.ವಿ.ಸುಧಾಕರನ್‌ ಹೇಳಿದ್ದಾರೆ. ಆದರೆ ಕಾಲೇಜಿಗೆ ಕೆಟ್ಟಹೆಸರು ಬರಬಾರದು ಎಂದು ಎರಡು ಪುಟಗಳನ್ನು ಹಿಂದಕ್ಕೆ ಪಡೆಯುವುದಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.