ADVERTISEMENT

ಹಿಂಗಾರು ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2011, 19:30 IST
Last Updated 26 ಅಕ್ಟೋಬರ್ 2011, 19:30 IST

ನವದೆಹಲಿ: ಕೇಂದ್ರ ಸರ್ಕಾರ 2011-12ನೇ ಸಾಲಿನ ಹಿಂಗಾರು ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೊಷಣೆ ಮಾಡಿದ್ದು, ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ.

ಈ ಬೆಳೆಗಳು 2012-13ನೇ ಸಾಲಿಗೆ ಮಾರುಕಟ್ಟೆಗೆ ಬರಲಿದೆ. ಗೋದಿಗೆ ಕನಿಷ್ಠ ಬೆಂಬಲ ಬೆಲೆ 165 ರೂಪಾಯಿ ಹೆಚ್ಚಳ ಮಾಡಿದ್ದು, ಕ್ವಿಂಟಾಲ್‌ಗೆ 1285 ರೂಪಾಯಿ ನಿಗದಿ ಮಾಡಿದೆ.

ಬಾರ್ಲಿಯ ಬೆಂಬಲ ಬೆಲೆಯನ್ನು ಇನ್ನೂರು ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಪ್ರತಿ ಕ್ವಿಂಟಾಲ್‌ಗೆ 980 ರೂಪಾಯಿ ನಿಗದಿಯಾಗಿದೆ. ಹಾಗಯೆ ಹುರಳಿ, ಬೇಳೆಕಾಳುಗಳ, ಸಾಸಿವೆಗೂ ಕನಿಷ್ಠ ಬೆಂಬಲ ಬಲೆ ಹೆಚ್ಚಳ ಮಾಡಲಾಗಿದೆ.

ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧ್ಯಕ್ಷತೆಯ ಆರ್ಥಿಕ ವಿಚಾರಗಳ ಮೇಲಿನ ಸಂಪುಟ ಸಮಿತಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಹಿಂಗಾರು ಬೆಳೆಗಳ ಮೇಲಿನ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ದೀಪಾವಳಿಗೆ ಸರ್ಕಾರ ರೈತರಿಗೆ ನೀಡಿರುವ ಕೊಡುಗೆ ಎಂದು ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಬಣ್ಣಿಸಿದ್ದಾರೆ.

ಬಾರ್ಲಿಯ ಬೆಂಬಲ ಬೆಲೆಯನ್ನು ಇನ್ನೂರು ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಪ್ರತಿ ಕ್ವಿಂಟಾಲ್‌ಗೆ 980 ರೂಪಾಯಿ ನಿಗದಿಯಾಗಿದೆ. ಹಾಗಯೆ ಹುರಳಿ, ಬೇಳೆಕಾಳುಗಳ, ಸಾಸಿವೆಗೂ ಕನಿಷ್ಠ ಬೆಂಬಲ ಬಲೆ ಹೆಚ್ಚಳ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT