ADVERTISEMENT

ಹಿಂಬಾಲಿಸುವುದು ಅಪರಾಧ: ದೆಹಲಿ ವಿಧಾನಸಭೆ ನಿರ್ಣಯ

ಪಿಟಿಐ
Published 27 ಮಾರ್ಚ್ 2018, 18:42 IST
Last Updated 27 ಮಾರ್ಚ್ 2018, 18:42 IST

ನವದೆಹಲಿ: ಮಹಿಳೆಯರನ್ನು ಹಿಂಬಾಲಿಸುವುದು ಜಾಮೀನು ರಹಿತ ಅಪರಾಧವನ್ನಾಗಿ ಪರಿಗಣಿಸಬೇಕು ಮತ್ತು ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆಸುವ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎನ್ನುವ ನಿರ್ಣಯವನ್ನು ದೆಹಲಿ ವಿಧಾನಸಭೆ ಮಂಗಳವಾರ ಕೈಗೊಂಡಿದೆ.

ಈ ಎರಡು ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರವು ಈಗಿರುವ ಕಾನೂನುಗಳಿಗೆ ತಿದ್ದುಪಡಿ ಮಾಡುವಂತೆ ಕೋರಿ ದೆಹಲಿ ಸರ್ಕಾರ ಮಸೂದೆಯನ್ನು ಮಂಡಿಸಬೇಕು ಎಂದು ಆಪ್‌ ಶಾಸಕ ಸೌರಭ್ ಭಾರದ್ವಾಜ್‌ ನಿರ್ಣಯ ಮಂಡಿಸಿದ್ದರು.

‘ಸರ್ಕಾರ ಶೀಘ್ರ ಮಸೂದೆಯನ್ನು ಮಂಡಿಸಲಿದೆ. ವಿಧಾನಸಭೆ ಅನುಮೋದನೆ ನೀಡಿದ ಬಳಿಕ ಕೇಂದ್ರಕ್ಕೆ ಕಳುಹಿಸಲಾಗುವುದು. ಕೇಂದ್ರವು ಯಾವುದೇ ರೀತಿಯ ಆಕ್ಷೇಪ ವ್ಯಕ್ತಪಡಿಸುವುದಿಲ್ಲ ಎನ್ನುವ ಭರವಸೆ ಇದೆ’ ಎಂದು ದೆಹಲಿ ಗೃಹ ಸಚಿವ ಸತ್ಯೇಂದ್ರ ಜೈನ್‌ ಸದನದಲ್ಲಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.