ADVERTISEMENT

ಹಿರಿಯ ಸಂಗೀತ ಸಂಯೋಜಕ ಖಯ್ಯಾಮ್‌ ನಿಧನ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 20:04 IST
Last Updated 19 ಆಗಸ್ಟ್ 2019, 20:04 IST
ಖಯ್ಯಾಮ್‌
ಖಯ್ಯಾಮ್‌   

ಮುಂಬೈ: ’ಕಭೀ ಕಭೀ’, ಉಮ್ರಾವ್‌ ಜಾನ್‌ ಮುಂತಾದ ಪ್ರಸಿದ್ಧ ಹಿಂದಿ ಚಿತ್ರ ಗೀತೆಗಳಿಗೆ ಸಂಗೀತ ನೀಡಿ ದ್ದ ಹಿರಿಯ ಸಂಯೋಜಕ ಖಯ್ಯಾಮ್‌ ಸೋಮವಾರ ರಾತ್ರಿ ಆಸ್ಪತ್ರೆಯಲ್ಲಿ ನಿಧನ ರಾದರು.

ಮಂಗಳವಾರ ಅಂತ್ಯಕ್ರಿಯೆ ನಡೆಯಲಿದೆ.ದೀರ್ಘ ಕಾಲದಿಂದ ಅಸ್ವಸ್ಥರಾಗಿದ್ದ ಅವರಿಗೆ 92 ವರ್ಷ ವಯಸ್ಸಾಗಿತ್ತು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಜುಹುವಿನ ಸುಜಯ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಖಯ್ಯಾಮ್‌ ಎಂದೇ ಗುರುತಿಸಿಕೊಂಡಿದ್ದ ಅವರ ಮೂಲ ಹೆಸರು ಮೊಹಮ್ಮದ್‌ ಝಹುರ್‌ ಹಶ್ಮಿ. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳಿಗೆ ಅವರು ಪಾತ್ರರಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.