ADVERTISEMENT

ಹುತಾತ್ಮ ಸಂದೀಪ್ ಚಿಕ್ಕಪ್ಪ, ಮೋಹನನ್ ನಿಧನ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 7:30 IST
Last Updated 5 ಫೆಬ್ರುವರಿ 2011, 7:30 IST

ನವದೆಹಲಿ, (ಪಿಟಿಐ): ಸಂಸತ್ ಭವನದ ಬಳಿ ಗುರುವಾರ ಆತ್ಮಾಹುತಿಗೆ ಯತ್ನಿಸಿ ತೀವ್ರವಾದ  ಸುಟ್ಟ ಗಾಯಗಳಿಂದ ಬಳಲುತ್ತಿದ್ದ, ಹುತಾತ್ಮ ಯೋಧ ಬೆಂಗಳೂರಿನ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರ ಚಿಕ್ಕಪ್ಪ ಕೆ. ಮೋಹನನ್ (56) ಅವರು, ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆಂದು ಪೊಲೀಸರು ಶನಿವಾರ ಇಲ್ಲಿ ತಿಳಿಸಿದ್ದಾರೆ.

ಇಲ್ಲಿನ ರಾಮಮನೋಹರ ಲೋಹಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೋಹನನ್ ಅವರಿಗೆ ಶೇ 95ರಷ್ಟು ಸುಟ್ಟ ಗಾಯಗಳಾಗಿದ್ದವು. ಅವರು  ಶುಕ್ರವಾರ ರಾತ್ರಿ 11ಗಂಟೆ 55 ನಿಮಿಷಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

‘26/11 ರ ಮುಂಬೈ ಸ್ಫೋಟಕ್ಕೆ ಬಲಿಯಾದವರಿಗೆ ಸರ್ಕಾರ ಏನೂ ಮಾಡಿಲ್ಲ, ಜೊತೆಗೆ ಸರಿಯಾಗಿ ನಡೆಸಿಕೊಂಡಿಲ್ಲ~ ಎಂದು ಆಕ್ರೋಶ ವ್ಯಕ್ತಪಡಿಸಿದ ಮೋಹನನ್ ಅವರು ಹತಾಶರಾಗಿದ್ದರು. ಸಂದೀಪ್ ಸಾವಿನಿಂದ ನೊಂದಿದ್ದ ಅವರು, ~ಸಂದೀಪ್ ನೋವು ಹೇಗಿತ್ತು ಎಂಬುದನ್ನು ಅನುಭವಿಸಲು ಬೆಂಕಿ ಹಚ್ಚಿಕೊಂಡಿದ್ದಾಗಿ~ ಹೇಳಿಕೊಂಡಿದ್ದರು.

ಸೋದರನನ್ನು ನೋಡಲು ಇಲ್ಲಿಗೆ ಧಾವಿಸಿ ಬಂದಿದ್ದ ಸಂದೀಪ್ ತಂದೆ ಉನ್ನಿಕೃಷ್ಣನ್ ಅವರು, ‘26/11 ಮುಂಬೈ ಸ್ಫೋಟಕ್ಕೆ ಬಲಿಯಾದವರಿಗೆ ಸರ್ಕಾರ ಏನೂ ಮಾಡಿಲ್ಲ ಎಂಬುದು ಮೋಹನ್ ನ  ವೈಯಕ್ತಿಕ ಅಭಿಪ್ರಾಯ. ಸಂದೀಪ ಸಾವಿನಿಂದ ನೊಂದಿದ್ದ ಆತ, ದುಃಖದಿಂದ ಪಾರಾಗಿದ್ದಾರೆ ಎಂದು ಕೊಂಡಿದ್ದೆ .ಆದರೆ ಆತ ಈ ಬಗೆಯಲ್ಲಿ ಸಾವು ತಂದುಕೊಳ್ಳುತ್ತಾನೆಂದು ಅಂದು ಕೊಂಡಿರಲಿಲ್ಲ~ ಎಂದಿದ್ದಾರೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.