ADVERTISEMENT

ಹೆಚ್ಚುವರಿ ಎಲ್‌ಪಿಜಿ ಆನ್‌ಲೈನ್‌ನಲ್ಲೇ ರದ್ದು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2012, 19:30 IST
Last Updated 19 ನವೆಂಬರ್ 2012, 19:30 IST

ನವದೆಹಲಿ (ಪಿಟಿಐ):  ಒಂದಕ್ಕಿಂತ ಹೆಚ್ಚಿರುವ ಎಲ್‌ಪಿಜಿ ಸಂಪರ್ಕವನ್ನು ಇನ್ನು ಮುಂದೆ ಆನ್‌ಲೈನ್ ಮೂಲಕ ಸರ್ಕಾರಕ್ಕೆ ಒಪ್ಪಿಸಬಹುದು.ಅದಕ್ಕಾಗಿ ಗ್ರಾಹಕರು ಮಾಡಬೇಕಾಗಿರುವುದು ಇಷ್ಟೆ- ಆಯಾ ಕಂಪೆನಿಗಳ ವೆಬ್‌ಸೈಟ್‌ಗೆ ಭೇಟಿ ನೀಡಿ ಸಂಪರ್ಕ ಒಪ್ಪಿಸುವ ಸಂಬಂಧ  (ಸರೆಂಡರ್) ವಿವರಗಳನ್ನು ದಾಖಲಿಸಬೇಕು.

ನಂತರ ಕಂಪೆನಿಯೇ ಗ್ರಾಹಕರ ಮನೆಗೆ ಬಂದು ಹೆಚ್ಚುವರಿ ಸಂಪರ್ಕಗಳನ್ನು ವಾಪಸ್ ಪಡೆಯುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುತ್ತದೆ.`ಎಲ್‌ಪಿಜಿ ಡೀಲರ್‌ಗಳಿಂದ ತೊಂದರೆ ಅನುಭವಿಸುತ್ತಿರುವ ಬಗ್ಗೆ ನಮಗೆ ಗ್ರಾಹಕರಿಂದ ಸಾಕಷ್ಟು ದೂರುಗಳು ಬಂದಿವೆ. ದೇಶದಲ್ಲಿರುವ ಪ್ರತಿ ವಿತರಕರನ್ನು ಗುರುತಿಸಿ ಶಿಕ್ಷಿಸುವುದು ಕಷ್ಟ. ಹಾಗಾಗಿ ಗ್ರಾಹಕರಿಗೂ ಸುಲಭವಾಗುವ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ~ ಎಂದು ಪೆಟ್ರೋಲಿಯಂ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

`ಒಂದು ಕುಟುಂಬಕ್ಕೆ ಒಂದು ಸಂಪರ್ಕ~ ಎಂಬ ನಿಯಮವನ್ನು ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಜಾರಿಗೆ ತರುತ್ತಿದ್ದು, ಗ್ರಾಹಕರು ತಾವು ಹೊಂದಿರುವ ಹೆಚ್ಚುವರಿ ಸಂಪರ್ಕವನ್ನು ಸ್ವಯಂ ಪ್ರೇರಿತರಾಗಿ ಸರ್ಕಾರಕ್ಕೆ ಒಪ್ಪಿಸಲು ಮನವಿ ಮಾಡಲಾಗಿದೆ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.