ADVERTISEMENT

ಹೆಲ್ಮೆಟ್‌: ‘ಬಿಐಎಸ್‌’ ಮಾನ್ಯತೆ ಕಡ್ಡಾಯ?

ಪಿಟಿಐ
Published 9 ಮೇ 2018, 19:30 IST
Last Updated 9 ಮೇ 2018, 19:30 IST
ಹೆಲ್ಮೆಟ್‌: ‘ಬಿಐಎಸ್‌’ ಮಾನ್ಯತೆ ಕಡ್ಡಾಯ?
ಹೆಲ್ಮೆಟ್‌: ‘ಬಿಐಎಸ್‌’ ಮಾನ್ಯತೆ ಕಡ್ಡಾಯ?   

ನವದೆಹಲಿ: ದ್ವಿಚಕ್ರ ವಾಹನ ಸವಾರರು ಧರಿಸುವ ಹೆಲ್ಮೆಟ್‌ಗಳು ಕಡ್ಡಾಯವಾಗಿ ಬಿಐಎಸ್‌ (ಭಾರತೀಯ ಪ್ರಮಾಣೀಕರಣ ಸಂಸ್ಥೆ) ಅನುಮೋದನೆ ಪಡೆದಿರಬೇಕು ಎಂದು ಶಿಫಾರಸು ಮಾಡಲಾಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

ಹೆಲ್ಮೆಟ್‌ಗಳಲ್ಲಿ ‘ದ್ವಿಚಕ್ರ ವಾಹನ’ ಎಂಬುದನ್ನು ಅಕ್ಷರದಲ್ಲಿ ಅಥವಾ ಚಿತ್ರದಲ್ಲಿ ಬರೆದಿರಬೇಕು. ಹೆಲ್ಮೆಟ್‌ಗಳಿಗೆ ಸಂಬಂಧಿಸಿ ಸಮಿತಿಯೊಂದನ್ನು ರಚಿಸ
ಲಾಗಿದೆ. ಈ ಸಮಿತಿಯ ಶಿಫಾರಸುಗಳಿಗೆ ಅನುಸಾರವಾಗಿಯೇ ಹೆಲ್ಮೆಟ್‌ಗಳನ್ನು ತಯಾರಿಸಬೇಕು ಎಂದು ತಿಳಿಸಿದ್ದಾರೆ.

ಭಾರತದ ಸವಾರರಿಗಾಗಿಯೇ ವಿಶೇಷವಾಗಿ ಹೆಲ್ಮೆಟ್‌ಗಳನ್ನು ತಯಾರಿಸಬೇಕು. ಹೆಲ್ಮೆಟ್‌ಗಳ ತೂಕ ಈಗ 1.5 ಕಿ.ಗ್ರಾಂ. ಇದೆ. ಅದನ್ನು 300 ಗ್ರಾಂನಷ್ಟು ಕಡಿಮೆ ಮಾಡಬೇಕು ಎಂದೂ ಸಮಿತಿ ಸಲಹೆ ನೀಡಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಸಾರಿಗೆ ಇಲಾಖೆಯ ಜಂಟಿ ಕಾರ್ಯದರ್ಶಿ ಅಭಯ್ ದಾಮ್ಲೆ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಸಮಿತಿ ಈಗ ವರದಿ ನೀಡಿದೆ. ಶಿಫಾರಸು ಜಾರಿಗೆ ಬಂದ ನಂತರ ಮಾನ್ಯತೆ ಇಲ್ಲದ ಹೆಲ್ಮೆಟ್‌ ಧರಿಸಿದರೆ
ಕ್ರಮ ಖಚಿತ ಎಂದು ಗಡ್ಕರಿ ತಿಳಿಸಿದ್ದಾರೆ.

ADVERTISEMENT

* ಪೊಲೀಸರು ವಿಧಿಸುವ ದಂಡದಿಂದ ಕಳಪೆ ಹೆಲ್ಮೆಟ್‌ಗಳು ಸವಾರನನ್ನು ರಕ್ಷಿಸಬಹುದಾದರೂ ಅಪಘಾತದ ಸಂದರ್ಭದಲ್ಲಿ ಜೀವ ರಕ್ಷಿಸುವುದಿಲ್ಲ

-ನಿತಿನ್‌ ಗಡ್ಕರಿ, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.