ADVERTISEMENT

ಹೊಸ ಜಲ ನೀತಿಯಲ್ಲಿ ಪರಿಹಾರ ಸೂತ್ರ

​ಪ್ರಜಾವಾಣಿ ವಾರ್ತೆ
Published 19 ಜನವರಿ 2011, 19:30 IST
Last Updated 19 ಜನವರಿ 2011, 19:30 IST

ನವದೆಹಲಿ (ಐಎಎನ್‌ಎಸ್): ನೀರು ಹಂಚಿಕೆ ಜೊತೆಗೆ ಹವಾಮಾನ ವೈಪರೀತ್ಯದ ದುಷ್ಪರಿಣಾಮಗಳು ಮತ್ತು ಅದನ್ನು ನಿವಾರಿಸಲು ಕೈಗೊಳ್ಳಬೇಕಾದ ಕ್ರಮಗಳನ್ನು ಒಳಗೊಂಡ ಹೊಸ ಜಲ ನೀತಿಯು ಈ ವರ್ಷಾಂತ್ಯದ ವೇಳೆಗೆ ರೂಪುಗೊಳ್ಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸರ್ಕಾರದ ಕ್ರಿಯಾ ಯೋಜನೆಗೆ ಚೌಕಟ್ಟು ಒದಗಿಸುವ ಮತ್ತು ನೀರು ಹಂಚಿಕೆ, ಅಂತರ್ಜಲ ಸಂರಕ್ಷಣೆ,  ರಾಷ್ಟ್ರೀಯ ಜಲ ನೀತಿ, ಮಳೆ ನೀರು ಸಂಗ್ರಹ, ನದಿಗಳ ಜೋಡಣೆಯಂತಹ ವಿವಿಧ ವಿಷಯಗಳನ್ನು ಒಳಗೊಳ್ಳುವ ರಾಷ್ಟ್ರೀಯ ಜಲ ನೀತಿಯನ್ನು 1987ರಲ್ಲಿ ಮೊದಲು ವ್ಯವಸ್ಥಿತವಾಗಿ ನಿರೂಪಿಸಲಾಯಿತು. ನಂತರ 2002ರಲ್ಲಿ ಮರುಪರಿಶೀಲಿಸಲಾಯಿತು.

ಈಗ ಮತ್ತೆ ಪರಿಶೀಲನೆ ನಡೆಯುತ್ತಿದ್ದು ಜಲ ಸಂಪನ್ಮೂಲಗಳ ಮೇಲೆ ಹವಾಮಾನ ವೈಪರೀತ್ಯದ ದುಷ್ಪರಿಣಾಮದ ಸಾಧ್ಯತೆ ಮತ್ತು ಅಗತ್ಯವಿರುವ ನಿವಾರಣಾ ಕ್ರಮಗಳ ಬಗ್ಗೆ ಸಲಹೆ ನೀಡಲಾಗುವುದು ಎಂದು  ಜಲಸಂಪನ್ಮೂಲ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.