ADVERTISEMENT

‘ಚಹ ಮಾರುವವನೂ ಪ್ರಧಾನಿಯಾಗಬಹುದು’

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 19:30 IST
Last Updated 5 ಡಿಸೆಂಬರ್ 2013, 19:30 IST

ನವದೆಹಲಿ (ಪಿಟಿಐ): ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಕಟು ಟೀಕಾಕಾರ ಎಂದೇ ಗುರುತಿಸಿ­ಕೊಂಡಿ
ರುವ ಕಾಂಗ್ರೆಸ್‌ ಮುಖಂಡ ದಿಗ್ವಿಜಯ್‌ ಸಿಂಗ್‌ ಅವರು,  ಮೋದಿ ಕುರಿತಾಗಿ ಅನಿರೀಕ್ಷಿತ ಹೇಳಿಕೆಗಳನ್ನು ನೀಡಿದ್ದಾರೆ.

ಮೋದಿ ಅವರು ‘ಮತಾಂಧತೆ’ ಸಿದ್ಧಾಂತಗಳಿಂದ ವಿಮುಖ­ರಾಗುತ್ತಿದ್ದಾರೆ ಎಂದು ಹೇಳಿರುವ ದಿಗ್ವಿಜಯ್‌ ಸಿಂಗ್‌, ‘ಚಹ ಮಾರುವ ವ್ಯಕ್ತಿ ಕೂಡ ನಮ್ಮ ದೇಶದ ಪ್ರಧಾನಿ­ಯಾಗಬಹುದು’ ಎಂದು ಹೇಳಿದ್ದಾರೆ. ದಿಗ್ವಿಜಯ್‌ ಸಿಂಗ್‌ ಹೇಳಿಕೆಯನ್ನು ಬಿಜೆಪಿ ಸ್ವಾಗತಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.