ನವದೆಹಲಿ: ಕನ್ನಡಕ್ಕೆ ಅನುವಾದಗೊಂಡ ‘ಮಹಾತ್ಮ ಜ್ಯೋತಿಬಾ ಫುಲೆ’ ಕೃತಿ ಸೇರಿದಂತೆ ವಿವಿಧ ಭಾಷೆಯ 23 ಅನುವಾದ ಕೃತಿಗಳು 2013ನೇ ಸಾಲಿನ ಸಾಹಿತ್ಯ ಅಕಾಡೆಮಿ ಅನುವಾದ ಪುರಸ್ಕಾರಕ್ಕೆ ಆಯ್ಕೆಯಾಗಿವೆ.
ಮರಾಠಿ ಲೇಖಕ ಧನಂಜಯ್ ಕೀರ್ ಅವರು ಬರೆದಿರುವ ಜೀವನ ಚರಿತ್ರೆಯನ್ನು ಜೆ.ಪಿ ದೊಡ್ಡಮನಿ ಅವರು ‘ಮಹಾತ್ಮ ಜ್ಯೋತಿಬಾ ಫುಲೆ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ.
ನವದೆಹಲಿಯ ರವೀಂದ್ರನಾಥ ಭವನದಲ್ಲಿ ಸೋಮವಾರ ಸಭೆ ಸೇರಿದ್ದ ವಿಶ್ವನಾಥ ಪ್ರಸಾದ್ ತಿವಾರಿ ನೇತೃತ್ವದ ಸಾಹಿತ್ಯ ಅಕಾಡೆಮಿಯ ಕಾರ್ಯಕಾರಿ ಸಮಿತಿ, ವಿವಿಧ ಭಾಷೆಯ 23 ಅನುವಾದಿತ ಕೃತಿಗಳನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ.
ಪುರಸ್ಕಾರವು 50,000 ನಗದು ಮತ್ತು ತಾಮ್ರ ಫಲಕವನ್ನು ಒಳಗೊಂಡಿದೆ.
ಆಗಸ್ಟ್‌ನಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಪುರಸ್ಕಾರವನ್ನು ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.