ADVERTISEMENT

ಡಾ. ಹಾಥಿ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 9 ಜುಲೈ 2018, 17:22 IST
Last Updated 9 ಜುಲೈ 2018, 17:22 IST
ಕಿರುತೆರೆ ಕಲಾವಿದ ಕವಿಕುಮಾರ ಆಜಾದ್
ಕಿರುತೆರೆ ಕಲಾವಿದ ಕವಿಕುಮಾರ ಆಜಾದ್   

ಮುಂಬೈ: ಪ್ರಖ್ಯಾತ ಕಿರುತೆರೆ ನಟ, ‘ಡಾ. ಹನ್ಸ್‌ರಾಜ್‌ ಹಾಥಿ’ ಪಾತ್ರದಿಂದಲೇ ಖ್ಯಾತರಾಗಿದ್ದ ಕವಿಕುಮಾರ್‌ ಆಜಾದ್‌ ಸೋಮವಾರ ಹೃದಯಾಘಾತದಿಂದ ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಇಲ್ಲಿನ ವರ್ಕ್‌ಹಾರ್ಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.
‘ತಾರಕ್‌ ಮೆಹ್ತಾ ಕಾ ಉಲ್ಟಾ ಚಷ್ಮಾ’ ಹಾಸ್ಯ ಕಾರ್ಯಕ್ರಮದಲ್ಲಿ ‘ಡಾ. ಹಾಥಿ’ ಪಾತ್ರದ ಮೂಲಕ ಮನೆ ಮಾತಾಗಿದ್ದ ಅವರ ‘ಸಹಿ ಬಾತ್‌ ಹೈ’ ಸಂಭಾಷಣೆ ಜನಮನ ಗೆದ್ದಿತ್ತು. ಅಂಕಣಕಾರ ಮತ್ತು ಪತ್ರಕರ್ತ ದಿವಂಗತ ತಾರಕ್‌ ಮೆಹ್ತಾ ಅವರ ಅಂಕಣ ಬರಹದಲ್ಲಿ ಪ್ರಕಟವಾದ ಲೇಖನಗಳನ್ನು ಆಧರಿಸಿ ಈ ಕಾರ್ಯಕ್ರಮವನ್ನು ರೂಪಿಸಲಾಗಿತ್ತು.
ಅತಿ ಹೆಚ್ಚು ಕಂತುಗಳಲ್ಲಿ ಪ್ರಸಾರವಾದ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ‘ತಾರಕ್‌ ಮೆಹ್ತಾ ಕಾ ಉಲ್ಟಾ ಚಷ್ಮಾ’ ಗಿನ್ನಿಸ್‌ ದಾಖಲೆಗೂ ಪಾತ್ರವಾಗಿತ್ತು. ಈ ವರ್ಷ ಜೂನ್‌ನಲ್ಲಿ 2,500 ಕಂತುಗಳವರೆಗೆ ಪ್ರಸಾರವಾಗಿದ್ದ ಈ ಶೋ, 5000ನೇ ಎಪಿಸೋಡ್‌ ಪ್ರದರ್ಶನ ಕಾಣುವತ್ತ ಹೆಜ್ಜೆ ಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.