ADVERTISEMENT

ಹುತಾತ್ಮರ ಕುಟುಂಬಸ್ಥರಿಗೆ ಗೌರವ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2021, 11:15 IST
Last Updated 23 ಸೆಪ್ಟೆಂಬರ್ 2021, 11:15 IST
ಕೆ.ಆರ್. ನಾಗರಾಜನ್
ಕೆ.ಆರ್. ನಾಗರಾಜನ್   

ಬೆಂಗಳೂರು: ಮಹಾತ್ಮ ಗಾಂಧೀಜಿ ಅವರು ಆಧುನಿಕ ಉಡುಗೆಯನ್ನು ತ್ಯಜಿಸಿ, ಧೋತಿಯನ್ನು ಮಾತ್ರ ಧರಿಸುವುದಾಗಿ ಶಪಥ ಮಾಡಿದ ಶತಮಾನೋತ್ಸವ ಆಚರಣೆಯನ್ನು ರಾಮ್‌ರಾಜ್‌ ಕಾಟನ್ ಕಂಪನಿಯು ತಮಿಳುನಾಡಿನ ತಿರುಪುರದಲ್ಲಿ ಆಯೋಜಿಸಿತ್ತು.

‘ಧೋತಿ 100’ ಹೆಸರಿನ ಈ ಕಾರ್ಯಕ್ರಮದಲ್ಲಿ ನೂರು ಮಂದಿ ಹುತಾತ್ಮರ ಕುಟುಂಬದವರನ್ನು ಹಾಗೂ ನೂರು ಜನ ನೇಕಾರರನ್ನು ಗೌರವಿಸಲಾಯಿತು ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. 100 ಸಸಿಗಳನ್ನು ಸಹ ಇದೇ ಸಂದರ್ಭದಲ್ಲಿ ನೆಡಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಮ್‌ರಾಜ್‌ ಕಾಟನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕೆ.ಆರ್. ನಾಗರಾಜನ್, ‘ನಾವು ಒಟ್ಟು ನಲವತ್ತು ಸಾವಿರ ನೇಕಾರರ ಬದುಕನ್ನು ಶ್ರೀಮಂತಗೊಳಿಸುತ್ತಿದ್ದೇವೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.