ADVERTISEMENT

ಸರ್ಕಾರಿ ಯೋಜನೆ: ಶೇ 100ರ ಗುರಿ ಸಾಧನೆಯಿಂದ ತಾರತಮ್ಯ ಅಂತ್ಯ- ಮೋದಿ

ರಾಜಕೀಯ ತುಷ್ಟೀಕರಣದ ಅಂತ್ಯಕ್ಕೂ ಇದೇ ಮದ್ದು: ಮೋದಿ

ಪಿಟಿಐ
Published 12 ಮೇ 2022, 22:30 IST
Last Updated 12 ಮೇ 2022, 22:30 IST
ಗುಜರಾತ್‌ನ ಭರೂಚ್ ಜಿಲ್ಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉತ್ಕರ್ಷ ಸಮರೋಹ್ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಅವರು ಮಾತನಾಡಿದರು -ಪಿಟಿಐ ಚಿತ್ರ
ಗುಜರಾತ್‌ನ ಭರೂಚ್ ಜಿಲ್ಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉತ್ಕರ್ಷ ಸಮರೋಹ್ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಅವರು ಮಾತನಾಡಿದರು -ಪಿಟಿಐ ಚಿತ್ರ   

ಭರೂಚ್: ಸರ್ಕಾರದ ಯೋಜನೆಗಳು ಶೇ 100ರಷ್ಟು ಗುರಿ ಸಾಧನೆಯು ತಾರತಮ್ಯ ಮತ್ತು ರಾಜಕೀಯ ತುಷ್ಟೀಕರಣವನ್ನು ಕೊನೆಗೊಳಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ಗುಜರಾತ್‌ನ ಭರೂಚ್ ನಗರದಲ್ಲಿ ಹಮ್ಮಿಕೊಂಡಿದ್ದ 'ಉತ್ಕರ್ಷ ಸಮರೋಹ್' ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, 'ಮಾಹಿತಿ ಕೊರತೆಯಿಂದಾಗಿ ಸರ್ಕಾರದ ಯೋಜನೆಗಳು ಕೇವಲ ಕಾಗದದ ಮೇಲೆ ಉಳಿದಿವೆ ಅಥವಾ ಅರ್ಹರಲ್ಲದ ಫಲಾನುಭವಿಗಳ ಪಾಲಾಗುತ್ತಿವೆ.

ಪ್ರತಿ ಫಲಾನುಭವಿಗಳಿಗೂ ಸರ್ಕಾರದ ಯೋಜನೆ ತಲುಪಿಸುವುದು ದುಸ್ತರ. ಆದಾಗ್ಯೂ, ಜನರ ಸೇವೆಗೆ ಇದೊಂದೇ ಮಾರ್ಗವಾಗಿದೆ. ಸರ್ಕಾರದ ಯೋಜನೆಗಳು ಪ್ರತಿಶತ 100ರ ಗುರಿ ತಲುಪಿದಾಗ ತುಷ್ಟೀಕರಣ ರಾಜಕೀಯದಲ್ಲಿ ತೊಡಗಲು ಅವಕಾಶವೇ ಇರುವುದಿಲ್ಲ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.