ADVERTISEMENT

ಜಮ್ಮು–ಕಾಶ್ಮೀರ: ಭಯೋತ್ಪಾದಕರಿಗೆ ನೆರವು ಆರೋಪ, 11 ನೌಕರರ ವಜಾ

ಪಿಟಿಐ
Published 10 ಜುಲೈ 2021, 16:39 IST
Last Updated 10 ಜುಲೈ 2021, 16:39 IST
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)
ಸಾಂದರ್ಭಿಕ ಚಿತ್ರ (ಕೃಪೆ – ಐಸ್ಟಾಕ್)   

ಶ್ರೀನಗರ: ಭಯೋತ್ಪಾದಕ ಸಂಘಟನೆಗಳಿಗೆ ನೆರವು ನೀಡಿದ ಆರೋಪದಲ್ಲಿ ಜಮ್ಮು–ಕಾಶ್ಮೀರ ಆಡಳಿತವು 11 ನೌಕರರನ್ನು ವಜಾಗೊಳಿಸಿದೆ. ಇದರಲ್ಲಿ ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ಸಯ್ಯದ್ ಸಲಾಹುದ್ದೀನ್ ಮಗ ಮತ್ತು ಪೊಲೀಸ್ ಇಲಾಖೆಯ ಇಬ್ಬರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಜಾಗೊಂಡವರಲ್ಲಿ ಜಮ್ಮು–ಕಾಶ್ಮೀರ ಪೊಲೀಸ್, ಶಿಕ್ಷಣ, ಕೃಷಿ, ಕೌಶಲಾಭಿವೃದ್ಧಿ, ವಿದ್ಯುತ್, ಆರೋಗ್ಯ ಮತ್ತು ಶೇರ್–ಇ–ಕಾಶ್ಮೀರ್ ಇನ್‌ಸ್ಟಿಟ್ಯೂಟ್‌ನ ಆಫ್‌ ಮೆಡಿಕಲ್ ಸೈನ್ಸಸ್‌ನ (ಎಸ್‌ಕೆಐಎಂಎಸ್) ನೌಕರರು ಇದ್ದಾರೆ.

ಈ ಪೈಕಿ, ನಾಲ್ವರು ಅನಂತ್‌ನಾಗ್‌, ಮೂವರು ಬುದ್‌ಗಾಂ, ಬಾರಾಮುಲ್ಲಾ, ಶ್ರೀಗನಗರ, ಪುಲ್ವಾಮಾ ಮತ್ತು ಕುಪ್ವಾರಾದ ತಲಾ ಒಬ್ಬರು ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಭಾರತೀಯ ಸಂವಿಧಾನದ 311ನೇ ವಿಧಿಯ ಅಡಿಯಲ್ಲಿ ವಿಚಾರಣೆಯಿಲ್ಲದೇ ಇವರನ್ನು ವಜಾಗೊಳಿಸಲಾಗಿದೆ. ಇವರು ಹೈಕೋರ್ಟ್‌ನಲ್ಲಿ ಮಾತ್ರವೇ ಮನವಿ ಸಲ್ಲಿಸಲು ಅವಕಾಶವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.