ADVERTISEMENT

ರಾಜಸ್ಥಾನ: ಹಿಂದೂ ವಲಸಿಗರ ಕುಟುಂಬದ 11 ಸದಸ್ಯರ ಶಂಕಾಸ್ಪದ ಸಾವು

ಪಿಟಿಐ
Published 9 ಆಗಸ್ಟ್ 2020, 9:56 IST
Last Updated 9 ಆಗಸ್ಟ್ 2020, 9:56 IST
ಘಟನಾ ಸ್ಥಳ ಪರಿಶೀಲಿಸುತ್ತಿರುವ ಪೊಲೀಸ್‌ ಅಧಿಕಾರಿಗಳು –ಪಿಟಿಐ ಚಿತ್ರ
ಘಟನಾ ಸ್ಥಳ ಪರಿಶೀಲಿಸುತ್ತಿರುವ ಪೊಲೀಸ್‌ ಅಧಿಕಾರಿಗಳು –ಪಿಟಿಐ ಚಿತ್ರ   

ಜೋಧ್‌ಪುರ: ಪಾಕಿಸ್ತಾನದ ಹಿಂದೂ ವಲಸಿಗರ ಕುಟುಂಬದ 11 ಸದಸ್ಯರು ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಶವಗಳು ಭಾನುವಾರ ಬೆಳಿಗ್ಗೆ ಇಲ್ಲಿನ ಲೋಡ್ತಾ ಗ್ರಾಮದಲ್ಲಿ ಕಂಡುಬಂದಿವೆ.

ಪಾಕಿಸ್ತಾನದ ಭಿಲ್‌‌ ಸಮುದಾಯದ ಕುಟುಂಬವೊಂದು ಡೆಚುವ್‌ ಪ್ರಾಂತ್ಯದ ಲೊಟ್ಟಾ ಗ್ರಾಮದ ಗುಡಿಸಲೊಂದರಲ್ಲಿ ವಾಸವಿದ್ದರು. ಅವರಗುಡಿಸಲಿನ ಪಕ್ಕದಲಿದ್ದ ಜಮೀನನಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಕುಟುಂಬದ ಏಕ ಮಾತ್ರ ಸದಸ್ಯ ಬದುಕುಳಿದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದರು.

ಅವಘಡ ಕಳೆದ ರಾತ್ರಿ ನಡೆದಿರುವ ಶಂಕೆ ಇದ್ದು, ರಾಸಾಯನಿಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಆದರೆ, ಉಳಿದಿರುವ ಕುಟುಂಬದ ಸದಸ್ಯ 'ತನಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾನೆ' ಎಂದು ಹಿರಿಯ ಪೊಲೀಸ್‌ ಅಧಿಕಾರಿ ರಾಹುಲ್‌ ಬೃಹತ್‌ ಮಾಹಿತಿ ನೀಡಿದ್ದಾರೆ.

ADVERTISEMENT

‘ಅವರ ದೇಹಗಳಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಸಲಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.