ADVERTISEMENT

ಬದೋಹಿಯಲ್ಲಿ ಸ್ಫೋಟ: 13 ಜನರ ಸಾವು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2019, 13:13 IST
Last Updated 23 ಫೆಬ್ರುವರಿ 2019, 13:13 IST
   

ಬದೋಹಿ: ಉತ್ತರಪ್ರದೇಶದ ಬದೋಹಿ ನಗರದ ಅಂಗಡಿಯೊಂದರಲ್ಲಿ ಶನಿವಾರ ಮಧ್ಯಾಹ್ನ ಪಟಾಕಿಗಳ ಸ್ಫೋಟ ಸಂಭವಿಸಿ 13 ಜನರು ಮಂದಿ ಮೃತಪಟ್ಟಿದ್ದು, 6 ಮಂದಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಮೂರು ಮನೆಗಳು ನೆಲಸಮಗೊಂಡಿವೆ.

ಕುಸಿದಿರುವ ಮನೆಗಳ ಅವಶೇಷಗಳ ಅಡಿ ಜನರು ಸಿಲುಕಿರುವ ಶಂಕೆ ಇದ್ದು, ರಕ್ಷಣಾ ತಂಡ ಕಾರ್ಯಾಚರಣೆ ನಡೆಸುತ್ತಿದೆ. ಈಗಾಗಲೆ ನಾಲ್ಕು ಶವಗಳನ್ನು ಹೊರ ತೆಗೆಯಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ವಿಧಿವಿಜ್ಞಾನ ಪರಿಣತರು ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರೋಹ್ತಾ ಬಜಾರ್‌ನ ಅಂಗಡಿಯಲ್ಲಿ ಸ್ಫೋಟ ಸಂಭವಿಸಿದ್ದು, ಅಂಗಡಿ ಮಾಲೀಕರನ್ನು ಕಲಿಯಾರ್‌ ಮನ್ಸೂರಿ ಎಂದು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಾಜೇಂದ್ರ ಪ್ರಸಾದ್‌ ತಿಳಿಸಿದ್ದಾರೆ.

ADVERTISEMENT

ಮನ್ಸೂರಿ ಅಕ್ರಮವಾಗಿ ಅಂಗಡಿಯಲ್ಲಿ ಪಟಾಕಿ ಮಾರಾಟ ಮಾಡುತ್ತಿದ್ದರು ಎನ್ನುವ ಆರೋಪವಿದೆ. ಮನ್ಸೂರಿ ಅವರ ಮಗ ಇರ್ಫಾನ್‌ ಈ ಅಂಗಡಿ ಹಿಂಭಾಗವೇ ಕಾರ್ಪೆಟ್‌ ಕೈಗಾರಿಕೆ ನಡೆಸುತ್ತಿದ್ದು, ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರಲ್ಲಿ ಕೆಲವರು ಕುಸಿದಿರುವ ಮನೆಗಳ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.