ADVERTISEMENT

13/7 ಸ್ಫೋಟ: ಐಎಂ ಸದಸ್ಯ ಎಟಿಎಸ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2012, 19:30 IST
Last Updated 1 ಫೆಬ್ರುವರಿ 2012, 19:30 IST

ಮುಂಬೈ (ಪಿಟಿಐ):  ಜುಲೈ 13ರಂದು ನಡೆದ ತ್ರಿವಳಿ ಸ್ಫೋಟ ಪ್ರಕರಣದ ಸಂಚು ರೂಪಿಸಿದ ಹಾಗೂ ಹಣಕಾಸು ನೆರವು ಒದಗಿಸಿದ್ದ ಇಂಡಿಯನ್ ಮುಜಾಹಿದ್ದೀನ್ ಕಾರ್ಯಕರ್ತ ಹರೂನ್ ನಾಯ್ಕನನ್ನು ಫೆಬ್ರುವರಿ 10ರವರಗೆ ಸ್ಫೋಟದ ತನಿಖೆ ನಡೆಸುತ್ತಿರುವ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ವಶಕ್ಕೆ ಒಪ್ಪಿಸಲಾಗಿದೆ.

 ಹರೂನ್‌ನಾಯ್ಕ ಖೋಟಾ ನೋಟು ಪ್ರಕರಣಕ್ಕೆ ಸಂಬಂಧಿಸಿದಂತೆ  ತಲೊಜಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ.

13/7 ಸ್ಫೋಟ ಪ್ರಕರಣದ ಸಂಬಂಧ ಎಟಿಎಸ್ ವಶಕ್ಕೆ ಪಡೆದುಕೊಂಡಿರುವ ನಾಲ್ಕನೇ ಆರೋಪಿ ಹರೂನ್ ನಾಯ್ಕ ಆಗಿದ್ದಾನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.