ADVERTISEMENT

ರಾಜಸ್ಥಾನ: 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಪಿಟಿಐ
Published 13 ಜೂನ್ 2025, 15:48 IST
Last Updated 13 ಜೂನ್ 2025, 15:48 IST
,,.
,,.   

ಜೈಪುರ: ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ ಯುವಕನೊಬ್ಬ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.  

ಈ ಘಟನೆ ಸೋಮವಾರ ರೂಪವಾಸ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಬಾಲಕಿ ತಂದೆ ಗುರುವಾರ ಸಂಜೆ ದೂರು ದಾಖಲಿಸಿದ್ದಾರೆ ಎಂದು ಠಾಣಾಧಿಕಾರಿ ಚಂದ್ರಮೋಹನ್‌ ತಿಳಿಸಿದ್ದಾರೆ.

ಜೂನ್‌ 9ರಂದು ಬಾಲಕಿ ಸ್ಥಳೀಯ ಮಾರುಕಟ್ಟೆಗೆ ಹೋಗುತ್ತಿದ್ದಾಗ, ಆರೋಪಿ ರೋಹಿತ್‌ ಮತ್ತು ಆತನ ಸ್ನೇಹಿತರಾದ ರಿಂಕು, ಬಬ್ಬಲ್‌ ಮತ್ತು ಬಬ್ಲು ಆಕೆಯನ್ನು ಬಲವಂತವಾಗಿ ತಮ್ಮ ಬಾಡಿಗೆ ಮನೆಗೆ ಕರೆದೊಯ್ಯದಿದ್ದಾರೆ. ರೋಹಿತ್‌ ಬಾಲಕಿಯ ಬಾಯಿಗೆ ಆಕೆಯ ಸ್ಕಾರ್ಫ್‌ ಕಟ್ಟಿ, ಅತ್ಯಾಚಾರ ಎಸಗಿದ್ದಾನೆ. ಆತನ ಸ್ನೇಹಿತರು ಹೊರಗಿನಿಂದ ಬಾಗಿಲು ಹಾಕಿಕೊಂಡು ಕಾವಲು ಕಾಯುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.