ADVERTISEMENT

1993ರ ಮುಂಬೈ ಸರಣಿ ಸ್ಫೋಟ: ಅಬುಸಲೇಂ, ಮುಸ್ತಫಾ ದೊಸ್ಸಾ ತಪ್ಪಿತಸ್ಥರು

ಪಿಟಿಐ
Published 16 ಜೂನ್ 2017, 9:45 IST
Last Updated 16 ಜೂನ್ 2017, 9:45 IST
1993ರ ಮುಂಬೈ ಸರಣಿ ಸ್ಫೋಟ: ಅಬುಸಲೇಂ, ಮುಸ್ತಫಾ ದೊಸ್ಸಾ ತಪ್ಪಿತಸ್ಥರು
1993ರ ಮುಂಬೈ ಸರಣಿ ಸ್ಫೋಟ: ಅಬುಸಲೇಂ, ಮುಸ್ತಫಾ ದೊಸ್ಸಾ ತಪ್ಪಿತಸ್ಥರು   

ಮುಂಬೈ: ಮುಂಬೈನಲ್ಲಿ 1993ರಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದ ತೀರ್ಪು ಪ್ರಕಟವಾಗಿದ್ದು, ಸ್ಫೋಟದ ಪ್ರಮುಖ ಸಂಚುಕೋರ ಹಾಗೂ, ಸ್ಫೋಟ ನಡೆಸಿದ್ದ ಮುಸ್ತಫಾ ದೊಸ್ಸಾ ಮತ್ತು ಆವನ ಸಹೋದರ ಮೊಹಮ್ಮದ್ ದೋಸಾ ಹಾಗೂ ಅಬು ಸಲೇಂ ಸೇರಿದಂತೆ ಆರು ಆರೋಪಿಗಳು ತಪ್ಪಿತಸ್ಥರು ಎಂದು ಮುಂಬೈನ ಟಾಡಾ ನ್ಯಾಯಾಲಯ ಶುಕ್ರವಾರ ತೀರ್ಪು ಪ್ರಕಟಿಸಿದೆ.

1993ರ ಮಾರ್ಚ್ 12ರಂದು ನಡೆದ ಸರಣಿ ಸ್ಫೋಟದಲ್ಲಿ 257 ಜನರು ಮೃತಪಟ್ಟು, 715 ಜನರು ಗಂಭೀರವಾಗಿ ಗಾಯಗೊಂಡಿದ್ದರು. ₹27 ಕೋಟಿ ಮೌಲ್ಯದ ಆಸ್ತಿ ಹಾನಿಯಾಗಿತ್ತು.

ಸ್ಫೋಟ ಪ್ರಕರಣದ ಪ್ರಮುಖ ಆರೋಪಿಗಳಾದ ಮುಸ್ತಫಾ ದೊಸ್ಸಾ, ಮೊಹಮ್ಮದ್ ದೊಸ್ಸಾ, ಮೊಹಮ್ಮದ್ ತಾಹಿರ್ ತಪ್ಪಿತಸ್ಥರು ಎಂದು ಮುಂಬೈನ ಸೆಷನ್ಸ್ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಸ್ಫೋಟಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸಿ ಸಹಕರಿಸಿದ್ದ ಫಿರೋಜ್ ರಶೀದ್ ಖಾನ್ ಸಹ ಅಪರಾಧಿ ಎಂದು ನ್ಯಾಯಾಲಯ ಹೇಳಿದೆ.

ADVERTISEMENT

ಪ್ರಕರಣದಲ್ಲಿ ಅಬು ಸಲೇಂ ಕೂಡ ಭಾಗಿಯಾಗಿದ್ದು, 2005ರಲ್ಲಿ ಆವನನ್ನು ಪೋರ್ಚುಗಲ್‌ನಲ್ಲಿ ಬಂಧಿಸಿ ಭಾರತಕ್ಕೆ ಕರೆತರಲಾಗಿತ್ತು. ಪ್ರಕರಣದ ಮತ್ತೊಬ್ಬ ಆರೋಪಿ ಮುಸ್ತಫಾ ದೊಸ್ಸಾನನ್ನು ಅರಬ್‌ ಸಂಯುಕ್ತ ರಾಷ್ಟ್ರ(ಯುಎಇ)ದಿಂದ ಬಂಧಿಸಿ ಕರೆತರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.