ADVERTISEMENT

2020ರ ದೆಹಲಿ ಗಲಭೆ ಪ್ರಕರಣ: ಉಮರ್‌ ಖಾಲಿದ್‌, ಖಾಲಿದ್‌ ಸೈಫಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2022, 13:36 IST
Last Updated 3 ಡಿಸೆಂಬರ್ 2022, 13:36 IST
ಉಮರ್‌ ಖಾಲಿದ್‌
ಉಮರ್‌ ಖಾಲಿದ್‌   

ನವದೆಹಲಿ(ಪಿಟಿಐ): 2020ರಲ್ಲಿ ದೆಹಲಿಯಲ್ಲಿ ನಡೆದಿದ್ದ ಗಲಭೆಗೆ ಸಂಬಂಧಿಸಿದ ಮೊಕದ್ದಮೆಯಲ್ಲಿ ಜೆಎನ್‌ಯು ವಿದ್ಯಾರ್ಥಿ ಉಮರ್‌ ಖಾಲಿದ್ ಮತ್ತು ‘ಯುನೈಟೆಡ್‌ ಅಗೈನ್ಸ್ಟ್‌ಹೇಟ್‌’ ಸಂಸ್ಥಾಪಕ ಖಾಲಿದ್‌ ಸೈಫಿ ಅವರನ್ನು ಇಲ್ಲಿಯ ಕೋರ್ಟ್‌ ಒಂದು ಖುಲಾಸೆಗೊಳಿಸಿದೆ.

ಉಮರ್‌ ಮತ್ತು ಸೈಫಿ ಅವರನ್ನು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಪುಲಸ್ತ್ಯ ಪ್ರಾಮಾಚಲ ಅವರು ದೆಹಲಿ ಗಲಭೆ ಮೊಕದ್ದಮೆಯಿಂದ ಬಿಡುಗಡೆಗೊಳಿಸಿದ್ದಾರೆ ಎಂದು ವಿಶೇಷ ಸರ್ಕಾರಿ ವಕೀಲ ಮಧುಕರ್‌ ಪಾಂಡೆ ದೃಢಪಡಿಸಿದರು. ಆದರೆ ಈ ಆದೇಶದಲ್ಲಿ ಏನು ಹೇಳಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಅವರು ನೀಡಿಲ್ಲ.

ಗಲಭೆ ವೇಳೆ ಮೈನ್‌ ಕಾರವಾಲ್‌ ನಗರ ರಸ್ತೆಯಲ್ಲಿ ಗುಂಪೊಂದು ಕಲ್ಲು ತೂರಾಟ ನಡೆಸುತ್ತಿತ್ತು ಎಂದು ಪೊಲೀಸ್‌ ಕಾನ್‌ಸ್ಟೇಬಲ್‌ ಸಂಗ್ರಾಮ್‌ ಸಿಂಗ್‌ ಎಂಬುವವರು ನೀಡಿದ್ದ ಹೇಳಿಕೆ ಆಧರಿಸಿ ಉಮರ್‌, ಸೈಫಿ ಸೇರಿ ಹಲವರ ವಿರುದ್ಧ ಪೊಲೀಸರು ಎಫ್ಐಆರ್‌ ದಾಖಲಿಸಿದ್ದರು. ಇದಕ್ಕೆ ಸಂಬಂಧಿಸಿದ ತನಿಖೆಯನ್ನು ಬಳಿಕ ಕ್ರೈಂ ಬ್ರಾಂಚ್‌ಗೆ ವರ್ಗಾಯಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.