ADVERTISEMENT

3ನೇ ಅವಧಿಗೆ ಪ್ರಧಾನಿ: ಗುಟ್ಟು ಬಿಡದ ಸಿಂಗ್

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 19:59 IST
Last Updated 15 ಏಪ್ರಿಲ್ 2013, 19:59 IST

ನವದೆಹಲಿ (ಪಿಟಿಐ): ಮುಂದಿನ ಪ್ರಧಾನಿ ಅಭ್ಯರ್ಥಿ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ  ಚರ್ಚೆ ನಡೆದಿರುವಾಗಲೇ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಒಂದು ವೇಳೆ ಮೂರನೇ ಅವಧಿಗೂ ಪ್ರಧಾನಿಯಾಗುವ ಆಹ್ವಾನ ಬಂದಲ್ಲಿ ಅದನ್ನು ಸ್ವೀಕರಿಸುವ ಅವಕಾಶವನ್ನು ಮುಕ್ತವಾಗಿ ಇರಿಸಿದ್ದಾರೆ. 

ಯುಪಿಎ ಸರ್ಕಾರ ಅವಧಿ ಪೂರ್ಣಗೊಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಅವರು, ಅವಧಿಗೂ ಮುನ್ನ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆಗಳನ್ನು ಸ್ಪಷ್ಟವಾಗಿ ತಳ್ಳಿ ಹಾಕಿದರು. ಸೋಮವಾರ ರಾಜಧಾನಿಯಲ್ಲಿ ನಡೆದ ರಾಷ್ಟ್ರೀಯ ಖಾಸಗಿ ಸುದ್ದಿವಾಹಿನಿಯೊಂದರ ಬೆಳ್ಳಿಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಂಗ್,  ಎರಡನೇ ಅವಧಿ ಪೂರ್ಣಗೊಳಿಸಲು ಇನ್ನೂ ಸಮಯಾವಕಾಶ ಇದೆ. ಆ ನಂತರ ಮೂರನೇ ಅವಧಿಯ ಬಗ್ಗೆ ಯೋಚಿಸಿದರಾಯಿತು ಎಂದರು.

`ಭಾರತದಂತಹ ದೊಡ್ಡ ದೇಶದ ಪ್ರಧಾನಿಯಾಗುವುದು ನನ್ನ ದೊಡ್ಡ ಸೌಭಾಗ್ಯ' ಎಂದರು.ತಮ್ಮ ನೇತೃತ್ವದ ಸರ್ಕಾರ ಐದು ವರ್ಷಗಳ ಅವಧಿ ಪೂರ್ಣಗೊಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.