
ಪ್ರಜಾವಾಣಿ ವಾರ್ತೆಹೈದರಾಬಾದ್: ನಿಜಾಮಾಬಾದ್ ಜಿಲ್ಲೆಯ ಬನಸವಾಡದಲ್ಲಿ ಇದೇ 13ರಂದು ಉಪಚುನಾವಣೆ ಇರುವುದರಿಂದ ತೆಲಂಗಾಣ ಜಂಟಿ ಕ್ರಿಯಾ ಸಮಿತಿಯು ಉದ್ದೇಶಿತ ಮೂರು ದಿನಗಳ ರೈಲು ತಡೆಯನ್ನು ಇದೇ 12ರ ಬದಲಿಗೆ 15ರಿಂದ ಆರಂಭಿಸಲು ನಿರ್ಧರಿಸಿದೆ.
ರೈಲು ತಡೆ ಹಿನ್ನೆಲೆಯಲ್ಲಿ ಈ ಮೊದಲು ದಕ್ಷಿಣ ಕೇಂದ್ರೀಯ ರೈಲ್ವೆ ಬದಲಿ ಮಾರ್ಗಗಳ ವ್ಯವಸ್ಥೆ ಮಾಡಿತ್ತು. ಇದೀಗ ರೈಲು ತಡೆ ಮುಂದಕ್ಕೆ ಹೋಗಿರುವುದರಿಂದ ಈ ವ್ಯವಸ್ಥೆಯನ್ನು ರದ್ದು ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.