ADVERTISEMENT

ಮೂವರು ಎಲ್‌ಇಟಿ ಉಗ್ರರ ಬಂಧನ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 14:40 IST
Last Updated 12 ಏಪ್ರಿಲ್ 2022, 14:40 IST
   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪುರ್‌ನಲ್ಲಿ ಸೋಮವಾರ ಭದ್ರತಾ ಪಡೆ ಸಿಬ್ಬಂದಿ ಮೂವರು ಲಷ್ಕರ್‌–ಎ–ತಯಬ (ಎಲ್‌ಇಟಿ) ಸಂಘಟನೆಯ ಹೈಬ್ರಿಡ್‌ ಭಯೋತ್ಪಾದಕರನ್ನು ಬಂಧಿಸಿದ್ದಾರೆ.

ಬಂಧಿತರನ್ನು ತುಫೈಲ್‌ ಮಜಿದ್‌ ಮಿರ್‌, ಒವೈಸ್‌ ಅಹ್ಮದ್‌ ಮಿರ್‌ ಹಾಗೂ ಶಬಿರ್‌ ಅಹ್ಮದ್‌ ವಾಘೆ ಎಂದು ಗುರುತಿಸಲಾಗಿದೆ.

‘ಖಚಿತ ಮಾಹಿತಿ ಮೇರೆಗೆ ಸೋಪುರ್‌ನ ಸನ್‌ವಾನಿ ಸೇತುವೆ ಬಳಿ ಸೋಮವಾರ ರಾತ್ರಿ ಭದ್ರತಾ ಪಡೆಗಳು ತಪಾಸಣೆ ನಡೆಸುತ್ತಿದ್ದಾಗ ಮೂವರು ಎಲ್ಇಟಿ ಹೈಬ್ರಿಡ್‌ ಭಯೋತ್ಪಾದಕರು ಸಿಕ್ಕಿಬಿದ್ದಿದ್ದು, ಬಂಧಿತರಿಂದ ಮೂರು ಪಿಸ್ತೂಲ್‌, ಮೂರು ಪಿಸ್ತೂಲ್‌ ಮ್ಯಾಗಜೀನ್‌, 22 ಪಿಸ್ತೂಲ್‌ ಗುಂಡುಗಳು, ಒಂದು ಗ್ರೆನೆಡ್‌ ಹಾಗೂ ₹ 79,800 ನಗದು ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸ್‌ ವಕ್ತಾರರು ತಿಳಿಸಿದರು.

ADVERTISEMENT

‘ಭಯೋತ್ಪಾದಕ ಸಂಘಟನೆಗಳ ಮುಖ್ಯಸ್ಥರ ನಿರ್ದೇಶನದಂತೆ ಜನ ಸಾಮಾನ್ಯರ ನಡುವೆ ಇದ್ದು, ದೇಶ ವಿರೋಧಿ ದುಷ್ಕೃತ್ಯಗಳಲ್ಲಿ ತೊಡಗಿರುವ ಹದಿಹರೆಯದ ವಯಸ್ಸಿನ ಉಗ್ರರ ಗುಂಪನ್ನು ಹೈಬ್ರಿಡ್‌ ಭಯೋತ್ಪಾದಕರು’ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಗುರುತಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.