ಇಂಫಾಲ್: ವಿವಿಧ ನಿಷೇಧಿತ ಸಂಘಟನೆಗಳಿಗೆ ಸೇರಿದ ಮೂವರು ಉಗ್ರರನ್ನು ಮಣಿಪುರದ ಇಂಫಾಲ್ ಜಿಲ್ಲೆಯಲ್ಲಿ ಗುರುವಾರ ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಕಾಂಗ್ಲೈ ಯಾವೋಲ್ ಕನ್ನಾ ಲೂಪ್ (ಸೊರೆಪಾ) ಸಂಘಟನೆಯ ಓಹಿನಾಮ್ ರವಿಚಂದ್ರ ಸಿಂಗ್‌ನನ್ನು (33) ಸಾವೊಂಬಂಗ್ ಪ್ರದೇಶದಲ್ಲಿ ಬಂಧಿಸಲಾಗಿದೆ.
ಶಸ್ತ್ರಾಸ್ತ್ರ, ಮದ್ದುಗುಂಡುಗಳ ಸಾಗಣೆ ಮಾಡುತ್ತಿದ್ದ ಪೀಪಲ್ಸ್ ಲಿಬರೇಷನ್ ಆರ್ಮಿಯ ವ್ಯಕ್ತಿಯೊಬ್ಬನನ್ನು ಆಂಡ್ರೊ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೈರಂಗ್ ಗ್ರಾಮದಲ್ಲಿ ಕಾಂಗ್ಲಿಪಾಕ್ ಕಮ್ಯುನಿಸ್ಟ್ ಪಕ್ಷದ (ಪಿಡಬ್ಲ್ಯುಜಿ) ಇಸ್ರಾಕ್ ಖಾನ್‌ನನ್ನು ಬಂಧಿಸಲಾಗಿದೆ.
ಶಸ್ತ್ರಾಸ್ತ್ರ ವಶ– ಬಂಕರ್ ನಾಶ:
ಇಂಫಾಲ್ ಪೂರ್ವ ಮತ್ತು ಚುರಾಚಾಂದಪುರ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
32 ಪಿಸ್ತೂಲ್‌ಗಳು, ಕೈಬಾಂಬು, ಸ್ಫೋಟಕಗಳು, 9 ಎಂಎಂ ಎಸ್‌ಎಂಜಿ, ಡಬಲ್ ಬ್ಯಾರೆಲ್ ಗನ್, ಮದ್ದುಗುಂಡುಗಳು, ರೇಡಿಯೊ ಸೆಟ್ ಸೇರಿದಂತೆ ಇನ್ನಿತರೆ ವಸ್ತುಗಳನ್ನು ಗುರುವಾರ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಥೌಬಲ್ ಜಿಲ್ಲೆಯ ಚಂದ್ರಖಾಂಗ್ ಬೆಟ್ಟದ ತಪ್ಪಲಿನಲ್ಲಿ ಉಗ್ರರು ನಿರ್ಮಿಸಿಕೊಂಡಿದ್ದ ಎರಡು ಬಂಕರ್‌ಗಳನ್ನು ಭದ್ರತಾ ಪಡೆಗಳು ಬುಧವಾರ ನಾಶಪಡಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.