ADVERTISEMENT

ಕಾಶ್ಮೀರದಲ್ಲಿ 3.9ರ ತೀವ್ರತೆಯ ಭೂಕಂಪ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2023, 10:58 IST
Last Updated 5 ಮಾರ್ಚ್ 2023, 10:58 IST
ಭೂಕಂಪ
ಭೂಕಂಪ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾನುವಾರ 3.9ರ ತೀವ್ರತೆಯ ಭೂಕಂಪ ಸಂಭವಿಸಿದೆ. ಆದರೆ ಯಾವುದೇ ಪ್ರದೇಶದಲ್ಲಿಯೂ ಸಾವು ನೋವು, ಆಸ್ತಿ ಹಾನಿ ಆದ ವರದಿಗಳಿಲ್ಲ.

ಬೆಳಗ್ಗೆ 6.57 ಗಂಟೆಗೆ ಸಾಧಾರಣ ತೀವ್ರತೆಯ ಕಂಪನ ಸಂಭವಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಶ್ರೀನಗರದಿಂದ 38 ಕಿ.ಮೀಟರ್‌ ದೂರದಲ್ಲಿರುವ ಬಂಡಿಪೋರಾ ಪ್ರದೇಶದಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿದೆ.

ADVERTISEMENT

ಕಾಶ್ಮೀರವು ಭೂಕಂಪನ ಪೀಡಿತ ಪ್ರದೇಶದಲ್ಲಿ ನೆಲೆಗೊಂಡಿದೆ. ಈ ಹಿಂದೆಯೂ ಅಲ್ಲಿ ದೊಡ್ಡ ಮಟ್ಟದ ಕಂಪನಗಳು ಸಂಭವಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.