ADVERTISEMENT

ಮಹಾರಾಷ್ಟ್ರ: ಯುದ್ಧ ಸಾಮಗ್ರಿ ಸಂಗ್ರಹಾಗಾರದಲ್ಲಿ ಭಾರಿ ಸ್ಫೋಟ, ಆರು ಮಂದಿ ಸಾವು

18 ಮಂದಿಗೆ ಗಾಯ

ಏಜೆನ್ಸೀಸ್
Published 20 ನವೆಂಬರ್ 2018, 6:08 IST
Last Updated 20 ನವೆಂಬರ್ 2018, 6:08 IST
ಚಿತ್ರ ಕೃಪೆ – ಎಎನ್‌ಐ
ಚಿತ್ರ ಕೃಪೆ – ಎಎನ್‌ಐ   

ವಾರ್ಧಾ: ಮಹಾರಾಷ್ಟ್ರದ ಪುಲ್‌ಗಾಂವ್‌ನಲ್ಲಿರುವ ಕೇಂದ್ರ ಯುದ್ಧ ಸಾಮಗ್ರಿ ಸಂಗ್ರಹಾಗಾರದಲ್ಲಿ ಮಂಗಳವಾರ ಬೆಳಿಗ್ಗೆ ಸಂಭವಿಸಿದ ಭಾರಿ ಸ್ಫೋಟದಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. 18 ಮಂದಿ ಗಾಯಗೊಂಡಿದ್ದಾರೆ.

ತಂಡವೊಂದು ಸ್ಫೋಟಕಗಳನ್ನು ನಾಶಪಡಿಸಲು ಸಾಗಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ. ಸುತ್ತಲಿನ ಕೆಲವು ಗ್ರಾಮಗಳವರೆಗೂ ಸ್ಫೋಟದ ಸದ್ದು ಕೇಳಿಸಿತ್ತು ಎಂದು ಮೂಲಗಳು ತಿಳಿಸಿವೆ.

ಮೃತರನ್ನು ಶಸ್ತ್ರಾಸ್ತ್ರ ನಿರ್ಮಾಣ ಕಾರ್ಖಾನೆಯ ಉದ್ಯೋಗಿ ಮತ್ತುಕಾರ್ಮಿಕರು ಎಂದು ಗುರುತಿಸಲಾಗಿದೆ. ನಾಲ್ವರು ಸ್ಫೋಟ ಸಂಭವಿಸಿದ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ನಾಗ್ಪುರ ರೇಂಜ್‌ನ ಐಜಿಪಿ ಕೆ.ಎಂ.ಎಂ. ಪ್ರಸನ್ನ ತಿಳಿಸಿದ್ದಾರೆ.

ADVERTISEMENT

ಘಟನೆ ಸಂಭವಿಸಿದಾಗ ಸ್ಥಳದಲ್ಲಿ 10ರಿಂದ 15 ಗುತ್ತಿಗೆ ಕಾರ್ಮಿಕರು ಇದ್ದರು ಎಂದು ವಾರ್ಧಾದ ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಿಖಿಲ್ ಪಿಂಗ್ಲೆ ತಿಳಿಸಿದ್ದಾರೆ.ಪುಲ್‌ಗಾಂವ್‌ ಯುದ್ಧ ಸಾಮಗ್ರಿ ಸಂಗ್ರಹಾಗಾರದ ಮೈದಾನವನ್ನುಮಧ್ಯಪ್ರದೇಶದ ಖಮಾರಿಯಾದ ಮದ್ದುಗುಂಡು ಕಾರ್ಖಾನೆಯೊಂದಕ್ಕೆ ಸ್ಫೋಟಕಗಳ ವಿಲೇವಾರಿಗಾಗಿ ನೀಡಲಾಗಿತ್ತು ಎಂದೂ ಅವರು ತಿಳಿಸಿದ್ದಾರೆ.

ಪುಲ್‌ಗಾಂವ್‌ ಯುದ್ಧ ಸಾಮಗ್ರಿ ಸಂಗ್ರಹಾಗಾರ ಏಷ್ಯಾದಲ್ಲೇ ಎರಡನೇ ಅತಿ ದೊಡ್ಡಯುದ್ಧ ಸಾಮಗ್ರಿ ಸಂಗ್ರಹಾಗಾರವಾಗಿದೆ. 2016ರಲ್ಲಿ ಇಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ 16 ಮಂದಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.