ADVERTISEMENT

ಕೇರಳ: ಕೋವಿಡ್‌ನಿಂದ 41 ಗರ್ಭಿಣಿಯರು ಸಾವು, 149 ಮಂದಿ ಆತ್ಮಹತ್ಯೆ- ವೀಣಾ ಜಾರ್ಜ್

ಪಿಟಿಐ
Published 27 ಅಕ್ಟೋಬರ್ 2021, 10:10 IST
Last Updated 27 ಅಕ್ಟೋಬರ್ 2021, 10:10 IST
ವೀಣಾ ಜಾರ್ಜ್‌
ವೀಣಾ ಜಾರ್ಜ್‌   

ತಿರುವನಂತಪುರಂ: ಒಂದೂವರೆ ವರ್ಷಗಳ ಹಿಂದೆ ಕೇರಳದಲ್ಲಿ ಕೋವಿಡ್‌ ಕಾಣಿಸಿಕೊಂಡಾಗಿನಿಂದ ಇಲ್ಲಿವರೆಗೆ 41 ಗರ್ಭಿಣಿಯರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂದು ರಾಜ್ಯದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಬುಧವಾರ ಇಲ್ಲಿ ತಿಳಿಸಿದರು.

ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಟಿ.ಜೆ. ವಿನೋದ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೋವಿಡ್‌ ದೃಢಪಟ್ಟವರಲ್ಲಿ 149 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದರು.

ಕಾಂಗ್ರೆಸ್‌ನ ಮ್ಯಾಥ್ಯೂ ಕುಜಲನಾಡನ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ‘ವರದಿಗಳ ಪ್ರಕಾರ, ರಾಜ್ಯ ಆರೋಗ್ಯ ಇಲಾಖೆಯು ಇತ್ತೀಚೆಗೆ ನಡೆಸಿದ ಸೆರೊ ಪ್ರೈವೆಲೆನ್ಸ್ ವೈಜ್ಞಾನಿಕ ಅಧ್ಯಯನದ ಸಂಶೋಧನೆಗಳು ಮತ್ತು ಐಸಿಎಂಆರ್‌ನ ಇಂಥದ್ದೇ ಸಮೀಕ್ಷೆಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.