ADVERTISEMENT

ಹಿಮಾಚಲ ಪ್ರದೇಶ: ಕಾರು ಹರಿದು ಐವರು ಪಾದಚಾರಿಗಳು ಸಾವು

ಪಿಟಿಐ
Published 7 ಮಾರ್ಚ್ 2023, 10:58 IST
Last Updated 7 ಮಾರ್ಚ್ 2023, 10:58 IST
.
.   

ಶಿಮ್ಲಾ (ಪಿಟಿಐ): ಕಾರು ಹರಿದು ಐವರು ಪಾದಾಚಾರಿಗಳು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡ ಘಟನೆ ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿಮ್ಲಾ– ಚಂಡೀಗಢ ಹೆದ್ದಾರಿಯ ಧರ್ಮಾಪುರ ಬಳಿ ಬೆಳಿಗ್ಗೆ ಅವರು ಕೆಲಸಕ್ಕೆಂದು ನಡೆದು ಹೋಗುವಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಾರು ಚಾಲಕನನ್ನು ಬಂಧಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.