ADVERTISEMENT

ಯೋಧರ ಜತೆ ರಾಜನಾಥ್ ಹೊಸವರ್ಷ

​ಪ್ರಜಾವಾಣಿ ವಾರ್ತೆ
Published 1 ಜನವರಿ 2018, 19:35 IST
Last Updated 1 ಜನವರಿ 2018, 19:35 IST
ಉತ್ತರಕಾಶಿಯಲ್ಲಿ ಐಟಿಬಿಪಿ ಅಧಿಕಾರಿಗಳು ಮತ್ತು ಯೋಧರೊಂದಿಗೆ ಮಾತುಕತೆ ನಡೆಸಿದ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ –ಪಿಟಿಐ ಚಿತ್ರ
ಉತ್ತರಕಾಶಿಯಲ್ಲಿ ಐಟಿಬಿಪಿ ಅಧಿಕಾರಿಗಳು ಮತ್ತು ಯೋಧರೊಂದಿಗೆ ಮಾತುಕತೆ ನಡೆಸಿದ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ –ಪಿಟಿಐ ಚಿತ್ರ   

ನವದೆಹಲಿ: ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಅವರು ಚೀನಾ ಗಡಿಯಲ್ಲಿರುವ ಇಂಡೊ–ಟಿಬೆಟ್‌ ಗಡಿ ಪೊಲೀಸ್‌ ಪಡೆಯ ಸಿಬ್ಬಂದಿ ಜತೆ ಹೊಸವರ್ಷ ಆಚರಿಸಿದ್ದಾರೆ.

ಸಮುದ್ರ ಮಟ್ಟದಿಂದ 11,700 ಅಡಿ ಎತ್ತರದಲ್ಲಿರುವ ನೆಲಾಂಗ್‌ ಕಣಿವೆಯ ಗಡಿಚೌಕಿಗೆ ಭೇಟಿ ನೀಡಿದ ಸಿಂಗ್‌, ಸಿಬ್ಬಂದಿ ಜತೆ ಹೊಸವರ್ಷದ ಶುಭಾಶಯ ವಿನಿಮಯ ಮಾಡಿಕೊಂಡರು.

ದೋಕಲಾ ಗಡಿ ಬಿಕ್ಕಟ್ಟು ಸಂಘರ್ಷದ ನಂತರ ಕೇಂದ್ರದ ಹಿರಿಯ ಸಚಿವರೊಬ್ಬರು ಭೇಟಿ ನೀಡುತ್ತಿರುವುದು ಇದೇ ಮೊದಲು.

ADVERTISEMENT

ಭಾನುವಾರ ಅವರು ಉತ್ತರಕಾಶಿ ಮತ್ತು ಮಟ್ಲಿಯಲ್ಲಿರುವ ಐಟಿಬಿಪಿ ಸಿಬ್ಬಂದಿ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಶುಭಾಶಯ ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.