ADVERTISEMENT

ಯೋಧರು ನಿತ್ಯವೂ ಸಾಯುತ್ತಾರೆ: ನೇಪಾಲ್ ಸಿಂಗ್

ಪಿಟಿಐ
Published 2 ಜನವರಿ 2018, 19:30 IST
Last Updated 2 ಜನವರಿ 2018, 19:30 IST
ನೇಪಾಲ್ ಸಿಂಗ್
ನೇಪಾಲ್ ಸಿಂಗ್   

ನವದೆಹಲಿ: ಯೋಧರು ದಿನವೂ ಸಾಯುತ್ತಾರೆ, ಸಾವು ಸಂಭವಿಸದೆ ಇರುವ ದೇಶವೇ ಇಲ್ಲ ಎಂದು ಬಿಜೆಪಿ ಸಂಸದ ನೇಪಾಲ್ ಸಿಂಗ್ ನೀಡಿರುವ ಹೇಳಿಕೆಗೆ ಮಂಗಳವಾರ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಭಯೋತ್ಪಾದಕ ದಾಳಿಯಲ್ಲಿ ಯೋಧರು ಹುತಾತ್ಮರಾಗುವ ಕುರಿತ ಚರ್ಚೆ ವೇಳೆ ಸಿಂಗ್ ಈ ರೀತಿ ಹೇಳಿದ್ದರು.

ಲೋಕಸಭೆ ಕಲಾಪದ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸಂಸದ ಜ್ಯೋತಿರಾಧಿತ್ಯ ಸಿಂಧಿಯಾ ಅವರು, ‘ಕೇಂದ್ರ ಸರ್ಕಾರ ಯೋಧರ ಜೀವದ ಕುರಿತು ಗಂಭೀರತೆ ಹೊಂದಿಲ್ಲ ಎನ್ನುವುದನ್ನು ಇದು ತೋರುತ್ತದೆ’ ಎಂದು ಟೀಕಿಸಿದರು.

ADVERTISEMENT

ರಾಮ್‌ಪುರ ಲೋಕಸಭಾ ಕ್ಷೇತ್ರ ಪ್ರತಿನಿಧಿಸುವ ಸಿಂಗ್ ಅವರು ತಮ್ಮ ಹೇಳಿಕೆಗೆ ಕ್ಷಮೆ ಕೋರಬೇಕು ಎಂದು ಕಾಂಗ್ರೆಸ್‌ ಸಂಸತ್ತಿನಲ್ಲಿ ಆಗ್ರಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.