ನವದೆಹಲಿ: ಲಂಡನ್‌ನಿಂದ ಮುಂಬೈಗೆ ತೆರಳುತ್ತಿದ್ದ ಜೆಟ್‌ಏರ್‌ವೇಸ್ ವಿಮಾನದಲ್ಲಿ ಇಬ್ಬರು ಪೈಲಟ್‌ಗಳು ಜಟಾಪಟಿ ನಡೆಸಿದ ಪ್ರಸಂಗ ನಡೆದಿದೆ.
ಈ ವಿಮಾನದಲ್ಲಿ 324 ಪ್ರಯಾಣಿಕರು ಮತ್ತು 14 ಸಿಬ್ಬಂದಿ ಇದ್ದರು. ವಿಮಾನ ಹಾರಾಟದ ಸಂದರ್ಭದಲ್ಲಿ ವಿಮಾನದ ಕಮಾಂಡರ್ ಅವರು ಮಹಿಳಾ ಪೈಲಟ್ ಕಪಾಳಕ್ಕೆ ಬಾರಿಸಿದ್ದಾರೆ. ಇದರಿಂದ, ಆಕ್ರೋಶಗೊಂಡ ಮಹಿಳಾ ಪೈಲಟ್ ಅಳುತ್ತಾ ಕಾಕ್‌ಪಿಟ್‌ನಿಂದ ಹೊರಗೆ ಬಂದಿದ್ದಾರೆ. ಬಳಿಕ, ಸಿಬ್ಬಂದಿ ಮನವಿ ಮೇರೆಗೆ ವಾಪಸ್ ತೆರಳಿದ್ದಾರೆ.
ಮಹಿಳಾ ಪೈಲಟ್ ಹೊರಗೆ ಇದ್ದಾಗ ಕಮಾಂಡರ್ ಸಹ ಹೊರಗೆ ಬಂದು ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಘಟನೆಗಾಗಿ ಇಬ್ಬರು ಪೈಲಟ್‌ಗಳು ವಿಮಾನ ಚಾಲನೆ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ. ‘ಪೈಲಟ್‌ಗಳ ನಡುವೆ ತಪ್ಪು ತಿಳಿವಳಿಕೆ ಉಂಟಾಗಿದೆ. ತಕ್ಷಣ ಸೌಹಾರ್ದಯುತವಾಗಿ ಪ್ರಕರಣ ಇತ್ಯರ್ಥಗೊಳಿಸಲಾಗಿದೆ.’ ಎಂದು ಜೆಟ್‌ಏರ್‌ವೇಸ್ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.