ADVERTISEMENT

ಹಿಂಸೆಗೆ ಪ್ರಚೋದನೆ ನೀಡಿದ ಆರೋಪ: ಜಿಗ್ನೇಶ್‌ ಮೇವಾನಿ, ಉಮರ್‌ ಖಾಲಿದ್‌ ವಿರುದ್ಧ ಪ್ರಕರಣ ದಾಖಲು

ಏಜೆನ್ಸೀಸ್
Published 4 ಜನವರಿ 2018, 11:56 IST
Last Updated 4 ಜನವರಿ 2018, 11:56 IST
ಜಿಗ್ನೇಶ್ ಮೇವಾನಿ – ಉಮರ್‌ ಖಾಲಿದ್‌
ಜಿಗ್ನೇಶ್ ಮೇವಾನಿ – ಉಮರ್‌ ಖಾಲಿದ್‌   

ಮುಂಬೈ: ಭೀಮಾ ಕೋರೆಗಾಂವ್‌ನಲ್ಲಿ ದಲಿತರ ಮೇಲೆ ನಡೆದ ಕಲ್ಲುತೂರಾಟದ ಬಳಿಕ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಗುಜರಾತ್‌ ಶಾಸಕ ಜಿಗ್ನೇಶ್ ಮೇವಾನಿ ಮತ್ತು ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಮುಖಂಡ ಉಮರ್‌ ಖಾಲಿದ್‌ ವಿರುದ್ಧ ಪ್ರಕರಣ ದಾಖಲಾಗಿದೆ.

ಮುಂಬೈನಲ್ಲಿ ಗುರುವಾರ ನಡೆಯಬೇಕಿದ್ದ ‘ಭಾರತೀಯ ವಿದ್ಯಾರ್ಥಿ ಸಮಾವೇಶ’ದಲ್ಲಿ ಭಾಗವಹಿಸಲು ಜಿಗ್ನೇಶ್‌ ಮೇವಾನಿ ಮತ್ತು ಉಮರ್‌ ಖಾಲಿದ್‌ ಅವರಿಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.

ಮುಂಬೈನ ವಿಲೆ ಪಾರ್ಲೆ ಪ್ರದೇಶದ ಭಾಯಿದಾಸ್‌ ಸಭಾಂಗಣದಲ್ಲಿ ವಿದ್ಯಾರ್ಥಿ ಸಮಾವೇಶ ಆಯೋಜಿಸಲಾಗಿತ್ತು. ಜಿಗ್ನೇಶ್‌ ಮೇವಾನಿ ಮತ್ತು ಉಮರ್‌ ಖಾಲಿದ್‌ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲು ಪೊಲೀಸರು ಅನುಮತಿ ನಿರಾಕರಿಸಿರುವ ವಿಷಯ ತಿಳಿದ ವಿದ್ಯಾರ್ಥಿಗಳು ಸಭಾಂಗಣದ ಹೊರಗೆ ಪ್ರತಿಭಟನೆ ನಡೆಸಿ ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.