ADVERTISEMENT

ಲಾಲು ಪುತ್ರಿ ಮಿಸಾ ವಿರುದ್ಧ 2ನೇ ಆರೋಪಪಟ್ಟಿ

ಪಿಟಿಐ
Published 6 ಜನವರಿ 2018, 19:30 IST
Last Updated 6 ಜನವರಿ 2018, 19:30 IST
ಮಿಸಾ ಭಾರ್ತಿ
ಮಿಸಾ ಭಾರ್ತಿ   

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಮಗಳು ಮಿಸಾ ಭಾರ್ತಿ ಮತ್ತು ಅಳಿಯ ಶೈಲೇಶ್ ಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ(ಇ.ಡಿ.) ಶನಿವಾರ ದೆಹಲಿ ನ್ಯಾಯಾಲಯಕ್ಕೆ ಎರಡನೇ ಆರೋಪಪಟ್ಟಿ ಸಲ್ಲಿಸಿದೆ.

2017ರ ಡಿಸೆಂಬರ್ 23ರಂದು ಇ.ಡಿ ಮೊದಲ ಆರೋಪ ಪಟ್ಟಿ ಸಲ್ಲಿಸಿತ್ತು. ಅದನ್ನು ನ್ಯಾಯಾಲಯ ಶನಿವಾರ ಪರಿಶೀಲಿಸಬೇಕಿತ್ತು. ಆದರೆ, ಅದರ ಮೊದಲೇ ಇ.ಡಿ. ಪರ ವಕೀಲರು ಎರಡನೇ ಆರೋಪಟ್ಟಿ ಸಲ್ಲಿಸಿದರು.

ಇದರ ಜತೆಗೆ ಮತ್ತಷ್ಟು ಪೂರಕ ಆರೋಪಪಟ್ಟಿಗಳನ್ನು ಸಲ್ಲಿಸಲು ಇನ್ನೂ ಕಾಲಾವಕಾಶ ನೀಡಬೇಕು ಎಂದು ವಕೀಲರು ಮನವಿ ಮಾಡಿಕೊಂಡರು. ಇದರಿಂದ ಅಸಮಾಧಾನಗೊಂಡ ನ್ಯಾಯಾಧೀಶರು, ಇ.ಡಿ.ಯನ್ನು ತರಾಟೆ ತೆಗೆದುಕೊಂಡರು.

ADVERTISEMENT

‘ವಿಚಾರಣೆ ಆರಂಭವಾಗಲು ನೀವು ಅವಕಾಶ ಮಾಡಿಕೊಡುತ್ತೀರೋ ಅಥವಾ ದೂರು–ಆರೋಪಪಟ್ಟಿಗಳನ್ನು ಸಲ್ಲಿಸುತ್ತಲೇ ಇರುತ್ತೀರೊ? ಇನ್ನು ಎಷ್ಟು ಪೂರಕ ಆರೋಪಪಟ್ಟಿಗಳನ್ನು ಸಲ್ಲಿಸಬೇಕೆಂದಿದ್ದೀರಿ? ದೇಶದ ಅತ್ಯುನ್ನತ ತನಿಖಾ ಸಂಸ್ಥೆ ಹೀಗೆ ವರ್ತಿಸಬಾರದು. ಇದೊಂದು ಅರೆಬರೆ ದೂರು’ ಎಂದು ನ್ಯಾಯಾಧೀಶರು ತರಾಟೆ ತೆಗೆದುಕೊಂಡರು.

ಸದ್ಯ ಇ.ಡಿ ಸಲ್ಲಿಸಿರುವ ಎರಡೂ ಆರೋಪಪಟ್ಟಿಗಳ ವಿಚಾರಣೆಯನ್ನು ಫೆಬ್ರುವರಿ 5ರಂದು ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.