ADVERTISEMENT

ಗೋಡೆಯ ಬಣ್ಣ ಬದಲಿಸುವುದು ಅಭಿವೃದ್ದಿಯೇ? ಪ್ರಕಾಶ್ ರಾಜ್ ಟ್ವೀಟ್ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2018, 10:35 IST
Last Updated 8 ಜನವರಿ 2018, 10:35 IST
ಗೋಡೆಯ ಬಣ್ಣ ಬದಲಿಸುವುದು ಅಭಿವೃದ್ದಿಯೇ? ಪ್ರಕಾಶ್ ರಾಜ್ ಟ್ವೀಟ್ ಪ್ರಶ್ನೆ
ಗೋಡೆಯ ಬಣ್ಣ ಬದಲಿಸುವುದು ಅಭಿವೃದ್ದಿಯೇ? ಪ್ರಕಾಶ್ ರಾಜ್ ಟ್ವೀಟ್ ಪ್ರಶ್ನೆ   

ಬೆಂಗಳೂರು: ಉತ್ತರ ಪ್ರದೇಶದಲ್ಲಿ ಹಜ್ ಭವನದ ಗೋಡೆಗೆ ಕೇಸರಿ ಬಣ್ಣ ಬಳಿದ ಅಲ್ಲಿನ ಬಿಜೆಪಿ ಸರ್ಕಾರವನ್ನು ಖಂಡಿಸಿ ನಟ ಪ್ರಕಾಶ್ ರಾಜ್ ಟ್ವೀಟ್ ಮಾಡಿದ್ದಾರೆ. 

ರೈತರು ಆಲೂಗಡ್ಡೆಗಳನ್ನು ನಿಮ್ಮ ಮನೆಯಂಗಳದಲ್ಲಿ ಸುರಿದು ಆಕ್ರೋಶ  ವ್ಯಕ್ತ ಪಡಿಸಿದ್ದಾರೆ. ಆದರೆ  ನಿಮ್ಮ ಕೃಷಿ ಸಚಿವರು ಹೇಳುತ್ತಿರುವುದು ಏನೆಂದರೆ ಆಲೂಗಡ್ಡೆ ಉತ್ತಮ ಗುಣಮಟ್ಟದ್ದಾಗಿಲ್ಲ. ಹಾಗಾಗಿ ಈ ಪ್ರತಿಭಟನೆ ರಾಜಕೀಯ ಪ್ರೇರಿತವಾದುದು.

ನೀವು ರೈತರ ಆಕ್ರೋಶವನ್ನು ಈ ರೀತಿ ಬಿಂಬಿಸುತ್ತೀರಿ,
ಗೋಡೆಯ ಬಣ್ಣವನ್ನು ಬದಲಾಯಿಸುವುದೇ ಅಭಿವೃದ್ಧಿಯೇ (ವಿಕಾಸ್)?. ನಂತರದ್ದು ವಿಕಾಸ್. ಮಿ.ವಿಕಾಸ್ ಪೈಂಟರ್ ಆಗಿದ್ದಾರೆಯೇ? #justasking ಎಂಬ ಟಿಪ್ಪಣಿಯೊಂದನ್ನು ಪ್ರಕಾಶ್ ರಾಜ್ ಟ್ವೀಟಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.