ADVERTISEMENT

ದೆಹಲಿಯಲ್ಲಿ ಬಸ್‌, ಮೆಟ್ರೊಗೆ ಒಂದೇ ಕಾರ್ಡ್‌

ಪಿಟಿಐ
Published 8 ಜನವರಿ 2018, 19:30 IST
Last Updated 8 ಜನವರಿ 2018, 19:30 IST

ನವದೆಹಲಿ: ನಗರ ಸಾರಿಗೆ ಬಸ್‌ ಹಾಗೂ ಮೆಟ್ರೊದಲ್ಲಿ ಪ್ರಯಾಣದ ವೇಳೆ ದರ ಪಾವತಿಸಲು ನೆರವಾಗುವ ಒಂದೇ ಕಾರ್ಡ್‌ ಸೇವೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಸೋಮವಾರ ಚಾಲನೆ ನೀಡಿದರು. ನಗರ ಸಾರಿಗೆ ವ್ಯವಸ್ಥೆ ಸುಧಾರಣೆ ನಿಟ್ಟಿನಲ್ಲಿ ಈ ಸೌಲಭ್ಯವೂ ಅತ್ಯಂತ ಮಹತ್ವದ ಹೆಜ್ಜೆ ಎಂದು ಇದೇ ವೇಳೆ ಅವರು ತಿಳಿಸಿದ್ದಾರೆ.

ಡೆಬಿಟ್‌ ಕಾರ್ಡ್‌ನಂತೆ ಇದು ಕಾರ್ಯನಿರ್ವಹಿಸಲಿದೆ. ರಾಜ್ಯದಲ್ಲಿರುವ 3,900 ಡಿಟಿಸಿ ಹಾಗೂ 1,600 ಕ್ಲಸ್ಟರ್‌ ಬಸ್‌ ಹಾಗೂ ಮೆಟ್ರೊ ಪ್ರಯಾಣಕ್ಕೂ ಇದನ್ನು ಬಳಸಬಹುದು.

‘ಪ್ರಾಯೋಗಿಕವಾಗಿ ಇದು ಜಾರಿಗೊಂಡಿದ್ದು, ಏಪ್ರಿಲ್‌ 1ರಿಂದ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ’ ಎಂದು ಸಾರಿಗೆ ಸಚಿವ ಕೈಲಾಶ್‌  ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.