ADVERTISEMENT

ಇರಿತ ಪ್ರಕರಣ: ಪ್ರಾಂಶುಪಾಲ ಸೆರೆ

ಪಿಟಿಐ
Published 18 ಜನವರಿ 2018, 19:30 IST
Last Updated 18 ಜನವರಿ 2018, 19:30 IST
ಗಾಯಗೊಂಡ ಬಾಲಕ ಹೃತಿಕ್‌ ಶರ್ಮಾ ದಾಖಲಾಗಿರುವ  ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಗುರುವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು ಪಿಟಿಐ ಚಿತ್ರ
ಗಾಯಗೊಂಡ ಬಾಲಕ ಹೃತಿಕ್‌ ಶರ್ಮಾ ದಾಖಲಾಗಿರುವ ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಗುರುವಾರ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು ಪಿಟಿಐ ಚಿತ್ರ   

ಲಖನೌ: ಇಲ್ಲಿನ ಶಾಲೆಯೊಂದರಲ್ಲಿ ಒಂದನೇ ತರಗತಿ ಬಾಲಕನ ಮೇಲೆ ಬಾಲಕಿಯೊಬ್ಬಳು ಹರಿತವಾದ ಆಯುಧದಿಂದ ಇರಿದ ಘಟನೆ ಸಂಬಂಧ, ಶಾಲೆಯ ಪ್ರಾಂಶುಪಾಲರನ್ನು ಗುರುವಾರ ಬಂಧಿಸಲಾಗಿದೆ.

ಸಹಪಾಠಿ ಮೃತಪಟ್ಟರೆ ಶಾಲೆಗೆ ರಜೆ ಸಿಗುತ್ತದೆ ಎಂದು ಬಾಲಕಿ ತಿಳಿದುಕೊಂಡಿದ್ದಳು ಎಂದು ಅಧಿಕಾರಿಗಳು ಹೇಳಿದ್ದಾರೆ. ಗಾಯಾಳು ಬಾಲಕ ಅಪಾಯದಿಂದ ಪಾರಾಗಿದ್ದಾನೆ.

ತ್ರಿವೇಣಿ ನಗರದ ಬ್ರೈಟ್‌ಲ್ಯಾಂಡ್‌ ಶಾಲೆಯ ಶೌಚಾಲಯದಲ್ಲಿ ಇದೇ 16ರಂದು ರಿತಿಕ್‌ ಎಂಬ ಆರು ವರ್ಷದ ಬಾಲಕನ ಮೇಲೆ ಇದೇ ಶಾಲೆಯ 11 ವರ್ಷದ ಬಾಲಕಿ ಚಾಕುವಿನಿಂದ ಇರಿದಿದ್ದಳು.

ADVERTISEMENT

ಗುರುಗ್ರಾಮದ ಶಾಲೆಯೊಂದರ ಶೌಚಾಲಯದಲ್ಲಿ ಎರಡನೇ ತರಗತಿಯ ಬಾಲಕ ಪ್ರದ್ಯುಮ್ನ ಠಾಕೂರ್‌ನ ಶವ ಪತ್ತೆಯಾದ ಘಟನೆ ಜನರ ಮನಸ್ಸಿನಿಂದ ಮರೆಯಾಗುವ ಮುನ್ನವೇ ಈ ಪ್ರಕರಣ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.