ADVERTISEMENT

ಗಡಿಯಲ್ಲಿ ಪಾಕಿಸ್ತಾನ ಸೇನೆ ಗುಂಡಿನ ದಾಳಿಗೆ ಒಬ್ಬ ಯೋಧ, ಇಬ್ಬರು ನಾಗರಿಕರು ಸಾವು

ಪಿಟಿಐ
Published 19 ಜನವರಿ 2018, 9:46 IST
Last Updated 19 ಜನವರಿ 2018, 9:46 IST
ಚಿತ್ರ: ಎಎನ್‌ಐ ಟ್ವೀಟ್
ಚಿತ್ರ: ಎಎನ್‌ಐ ಟ್ವೀಟ್   

ಜಮ್ಮು: ಪಾಕಿಸ್ತಾನ ಸೇನೆ ಜಮ್ಮು ಮತ್ತು ಸಾಂಬಾ ಜಿಲ್ಲೆ ವ್ಯಾಪ್ತಿಯ ಅಂತರರಾಷ್ಟ್ರೀಯ ಗಡಿಯಲ್ಲಿ ಶುಕ್ರವಾರ ನಾಗರಿಕ ವಸತಿ ಪ್ರದೇಶ ಹಾಗೂ ಗಡಿ ಠಾಣೆಗಳ ಮೇಳೆ ಗುಂಡಿನ ದಾಳಿ ನಡೆಸಿದ್ದು, ಒಬ್ಬ ಯೋಧ ಹಾಗೂ ಇಬ್ಬರು ನಾಗರಿಕರು ಮೃತಪಟ್ಟಿದ್ದಾರೆ.

ಭಾರತೀಯ ಗಡಿ ಭದ್ರತಾಪಡೆ ಪ್ರತಿ ದಾಳಿ ನಡೆಸಿದ್ದು, ತಕ್ಕ ಪ್ರತ್ಯುತ್ತರ ನೀಡಿದೆ.

ಪಾಕಿಸ್ತಾನ ಸೇನೆಯ ಸೈನಿಕರು ಗಡಿಯಲ್ಲಿನ ಆರ್‌ಎಸ್‌ ಪುರ, ಅರೆನ್ ಮತ್ತು ರಾಮಗರ್‌ ವಲಯದಲ್ಲಿ ಇಂದು ಬೆಳಿಗ್ಗೆ 6.40ಕ್ಕೆ ನಡೆಸಿದ ಗುಂಡಿನ ದಾಳಿ ನಡೆಸಿದೆ ಎಂದು ಬಿಎಸ್‌ಎಫ್‌ನ ಅಧಿಕಾರಿ ತಿಳಿಸಿದ್ದಾರೆ.

ADVERTISEMENT

40 ಗಡಿ ಠಾಣೆಗಳನ್ನು ಗುರಿಯಾಗಿರಿಸಿ ಪಾಕಿಸ್ತಾನ ಸೇನೆ ದಾಳಿ ನಡೆಸಿದೆ. 82 ಎಂಎಂ ಮತ್ತು 52 ಮಾರ್ಟರ್ ಬಾಂಬ್‌ ಹಾಗೂ ಸಣ್ಣ ಮತ್ತು ಸ್ವಯಂಚಾಲಿತ ಬಂದೂಕುಗಳನ್ನು ಬಳಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ದಾಳಿಯಲ್ಲಿ ಮಹಿಳೆ ಸೇರಿದಂತೆ ಇಬ್ಬರು ನಾಗರಿಕರು ಸಾವಿಗೀಡಾಗಿದ್ದಾರೆ. ಮೂವರು ನಾಗರಿಕರು ಗಾಯಗೊಂಡಿದ್ದಾರೆ. ದಾಳಿಯಿಂದಾಗಿ ಈ ವಲಯದ ಶಾಲೆಗಳನ್ನು ಮುಚ್ಚಲಾಗಿದೆ.

ಸಾಂಬಾ ವಲಯದಲ್ಲಿ ನಡೆದ ದಾಳಿಯಲ್ಲಿ ಬಿಎಸ್‌ಎಫ್‌ನ ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಹಿರಾನಗರ ವ್ಯಾಪ್ತಿಯಲ್ಲಿ ನಡೆದ ದಾಳಿಯಲ್ಲಿ ಐವರು ಗಾಯಗೊಂಡಿದ್ದಾರೆ. ಸ್ಥಳೀಯರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.