ADVERTISEMENT

ಆ್ಯಸಿಡ್ ದಾಳಿ ಸಂತ್ರಸ್ತರಿಗೂ ಕೇಂದ್ರ ನೌಕರಿಯಲ್ಲಿ ಮೀಸಲಾತಿ

ಪಿಟಿಐ
Published 28 ಜನವರಿ 2018, 19:30 IST
Last Updated 28 ಜನವರಿ 2018, 19:30 IST

ನವದೆಹಲಿ: ಕಲಿಕಾ ನ್ಯೂನತೆ (ಆಟಿಸಂ), ಮಾನಸಿಕ ಮತ್ತು ಬೌದ್ಧಿಕ ನ್ಯೂನತೆ ಇರುವವರ ಜತೆಗೆ, ಆ್ಯಸಿಡ್‌ ದಾಳಿ ಸಂತ್ರಸ್ತರಿಗೂ ಕೇಂದ್ರ ಸರ್ಕಾರದ ಉದ್ಯೋಗ ನೇಮಕಾತಿಗಳಲ್ಲಿ ಮೀಸಲಾತಿ ದೊರೆಯಲಿದೆ.

ಆ್ಯಸಿಡ್ ದಾಳಿಯ ಸಂತ್ರಸ್ತರಿಗೆ ಕೇಂದ್ರ ಸರ್ಕಾರದ ನೇಮಕಾತಿಯಲ್ಲಿ ಶೇ 1ರಷ್ಟು ಮೀಸಲಾತಿ ನೀಡುವಂತೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಇತ್ತೀಚೆಗೆ ಎಲ್ಲ ಕೇಂದ್ರ ಸರ್ಕಾರಿ ಇಲಾಖೆಗಳಿಗೂ ಪತ್ರ ಬರೆದಿದೆ.

ನ್ಯೂನತೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಎ, ಬಿ ಮತ್ತು ಸಿ ಗುಂಪಿನ ಖಾಲಿ ಹುದ್ದೆಗಳ ನೇರ ನೇಮಕಾತಿ ಸಂದರ್ಭದಲ್ಲಿ ನೀಡಲಾಗುತ್ತಿದ್ದ ಮೀಸಲಾತಿಯನ್ನು ಶೇ3 ರಿಂದ ಶೇ 4ಕ್ಕೆ  ಹೆಚ್ಚಿಸಲಾಗಿದೆ ಎಂದು ಸರ್ಕಾರಿ ಆದೇಶ ಹೇಳಿದೆ. ದೃಷ್ಟಿಮಾಂದ್ಯ, ಶ್ರವಣದೋಷ, ನಡೆದಾಡಲು ತಡೆಯೊಡ್ಡುವ ನರದೋಷ (ಸೆರೆಬ್ರಲ್‌ ಪಲ್ಸಿ), ಕುಷ್ಠರೋಗ, ಕಡಿಮೆ ಎತ್ತರವಿರುವ ವ್ಯಕ್ತಿಗಳು, ಸ್ನಾಯುದೋಷವುಳ್ಳವರ ಜತೆ ಆ್ಯಸಿಡ್‌ ಸಂತ್ರಸ್ತರಿಗೂ ಎಲ್ಲ ಹುದ್ದೆಗಳಲ್ಲೂ ಶೇ 1ರಷ್ಟು ಮೀಸಲಾತಿ ನೀಡುವಂತೆ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಇತ್ತೀಚೆಗೆ ಎಲ್ಲ ಕೇಂದ್ರ ಸರ್ಕಾರಿ ಇಲಾಖೆಗಳಿಗೂ ಪತ್ರ ಬರೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.