ADVERTISEMENT

ರೈಲ್ವೆಗೆ ₹1.48 ಲಕ್ಷ ಕೋಟಿ; ಬೆಂಗಳೂರಿಗೆ 160 ಕಿ.ಮೀ. ಉಪನಗರ ಸಂಪರ್ಕ ಯೋಜನೆಗೆ ₹17 ಸಾವಿರ ಕೋಟಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 13:29 IST
Last Updated 1 ಫೆಬ್ರುವರಿ 2018, 13:29 IST
ರೈಲ್ವೆಗೆ ₹1.48 ಲಕ್ಷ ಕೋಟಿ; ಬೆಂಗಳೂರಿಗೆ 160 ಕಿ.ಮೀ. ಉಪನಗರ ಸಂಪರ್ಕ ಯೋಜನೆಗೆ ₹17 ಸಾವಿರ ಕೋಟಿ
ರೈಲ್ವೆಗೆ ₹1.48 ಲಕ್ಷ ಕೋಟಿ; ಬೆಂಗಳೂರಿಗೆ 160 ಕಿ.ಮೀ. ಉಪನಗರ ಸಂಪರ್ಕ ಯೋಜನೆಗೆ ₹17 ಸಾವಿರ ಕೋಟಿ   

ನವದೆಹಲಿ: ಭಾರತೀಯ ರೈಲ್ವೆಗಾಗಿ ಈ ಬಾರಿ ₹1,48,528 ಕೋಟಿ ಮೀಸಲಿಡಲಾಗಿದೆ.

ಬುಲೆಟ್‌ ರೈಲು ಕಾರ್ಯಕ್ರಮದ ಕುರಿತು ತರಬೇತಿಗಾಗಿ ವಡೋದರಾದಲ್ಲಿ ರೈಲ್ವೆ ಸಂಸ್ಥೆ ಸ್ಥಾಪನೆಯಾಗಲಿದೆ.

ಬೆಂಗಳೂರಿಗೆ 160 ಕಿ.ಮೀ. ಉಪನಗರಗಳ ರೈಲ್ವೆ  ಸಂಪರ್ಕ ಯೋಜನೆಗೆ ₹17 ಸಾವಿರ ಕೋಟಿ, ಮುಂಬೈ ಸಾರಿಗೆ ಸಂಪರ್ಕ ವಿಸ್ತರಣೆಗೆ ಕಾರ್ಯಕ್ರಮ. 600 ಪ್ರಮುಖ ರೈಲ್ವೆ ನಿಲ್ದಾಣಗಳ ಪುನರ್‌ಅಭಿವೃದ್ಧಿ ಮಾಡಲಾಗುತ್ತದೆ.

ADVERTISEMENT

ರೈಲ್ವೆ ಮಾರ್ಗಗಳ ಸುರಕ್ಷಣೆ, ನಿರ್ವಹಣೆಗೆ ಆದ್ಯತೆ ನೀಡಲಾಗುತ್ತಿದೆ. ನೂತನ ತಂತ್ರಜ್ಞಾನಗಳ ಬಳಕೆ ಹಾಗೂ ಮಂಜು ಆವರಿಸಿರುವ ಸಂದರ್ಭದಲ್ಲಿ ಸುರಕ್ಷತೆಗಾಗಿ ವಿಶೇಷ ಉಪಕರಣ ಅಳವಡಿಕೆ ಆಗಲಿದೆ.

ಎಲ್ಲ ರೈಲ್ವೆ ನಿಲ್ದಾಣಗಳಲ್ಲಿ ವೈಫೈ ಹಾಗೂ ಸಿಸಿಟಿವಿ ಅಳವಡಿಕೆ. 25 ಸಾವಿರ ಪ್ರಯಾಣಿಕರು ಸಂಚರಿಸುವ ರೈಲ್ವೆ ನಿಲ್ದಾಣಗಳಲ್ಲಿ ಎಸ್ಕಲೇಟರ್‌ ಅಳವಡಿಕೆ.

ಭಾರತ್‌ಮಾಲಾ ಯೋಜನೆ ಅಡಿ ರಸ್ತೆ ಸಂಪರ್ಕ ಉನ್ನತೀಕರಿಸಲು ₹5.35 ಲಕ್ಷ ಕೋಟಿ ಮೀಸಲು.

ಉಡಾನ್‌ ವಿಮಾನಯಾನ ಸೇವೆ 56 ವಿಮಾನ ನಿಲ್ದಾಣಗಳಿಗೆ ವಿಸ್ತರಣೆ, ಸಂಪರ್ಕ. ಪ್ರಸ್ತುತ ದೇಶದಲ್ಲಿ 124 ವಿಮಾನ ನಿಲ್ದಾಣಗಳಿದ್ದು, ಮುಂದಿನ ದಿನಗಳಲ್ಲಿ ವಿಮಾನ ನಿಲ್ದಾಣಗಳ ಸಂಖ್ಯೆ ಐದು ಪಟ್ಟು ಹೆಚ್ಚಾಗಲಿದೆ. ವಾರ್ಷಿಕ 100 ಕೋಟಿ ವಿಮಾನ ಪ್ರಯಾಣದ ಗುರಿ ಹೊಂದಲಾಗಿದೆ.

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.