ADVERTISEMENT

ಶೆಲ್‌ ದಾಳಿ: 71 ಶಾಲೆಗಳು ಬಂದ್‌

ಪಿಟಿಐ
Published 1 ಫೆಬ್ರುವರಿ 2018, 19:30 IST
Last Updated 1 ಫೆಬ್ರುವರಿ 2018, 19:30 IST

ಜಮ್ಮು: ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆಯು ನಾಗರಿಕರನ್ನು ಗುರಿಯಾಗಿಸಿ ಭಾರಿ ಶೆಲ್‌ ದಾಳಿ ನಡೆಸಿದ ಕಾರಣದಿಂದಾಗಿ ಅಧಿಕಾರಿಗಳು 71 ಶಾಲೆಗಳನ್ನು ಮುಚ್ಚಲು ಆದೇಶ ನೀಡಿದ್ದಾರೆ.

‘ನೌಶೇರ್‌ ಮತ್ತು ಲಾಮ್‌ ಸೆಕ್ಟರ್‌ನಲ್ಲಿ ಗುರುವಾರ ಮುಂಜಾನೆಯವರೆಗೆ ಪಾಕಿಸ್ತಾನದ ಸೇನೆ ಶೆಲ್‌ ದಾಳಿ ನಡೆಸಿದೆ’ ಎಂದು ರಜೌರಿಯ ಉಪ ಆಯುಕ್ತ ಶಾಹಿದ್‌ ಇಕ್ಬಾಲ್‌ ಚೌಧರಿ ತಿಳಿಸಿದ್ದಾರೆ.

ಕಂಪ್ಲ, ಪುಖಾರಿ, ಲಾಮ, ಅನ್ವರ್‌ ಭಂಡಾರ್‌ ಮತ್ತು ರಟ್ಟಲ್‌ ಬಸಾಲಿ ಪ್ರದೇಶದಲ್ಲಿ ಶೆಲ್‌ ದಾಳಿ ನಡೆದಿದೆ. ದಾಳಿಯಿಂದ ಎಚ್ಚೆತ್ತುಕೊಂಡ ಕೂಡಲೇ 71 ಶಾಲೆಗಳನ್ನು ಮುಚ್ಚುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.