ADVERTISEMENT

ವಾಯು ಮಾಲಿನ್ಯ ನಿಯಂತ್ರಣಕ್ಕೆ ವಿಶೇಷ ಯೋಜನೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 19:30 IST
Last Updated 1 ಫೆಬ್ರುವರಿ 2018, 19:30 IST
ವಾಯು ಮಾಲಿನ್ಯ ನಿಯಂತ್ರಣಕ್ಕೆ ವಿಶೇಷ ಯೋಜನೆ
ವಾಯು ಮಾಲಿನ್ಯ ನಿಯಂತ್ರಣಕ್ಕೆ ವಿಶೇಷ ಯೋಜನೆ   

ನವದೆಹಲಿ: ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ದೆಹಲಿ ಸರ್ಕಾರ ಹಾಗೂ ಪಕ್ಕದ ರಾಜ್ಯಗಳ ಸಹಕಾರದೊಂದಿಗೆ ವಿಶೇಷ ಯೋಜನೆಯನ್ನು ರೂಪಿಸಲಾಗುವುದು ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ.

ಕೃಷಿ ತ್ಯಾಜ್ಯ ನಿರ್ವಹಣೆಗಾಗಿ ಯಂತ್ರೋಪಕರಣಗಳ ಖರೀದಿಗೆ ಅನುದಾನ ನೀಡಲು ಮತ್ತು ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಹರಿಯಾಣ, ಪಂಜಾಬ್‌, ಉತ್ತರ ಪ್ರದೇಶ ಮತ್ತು ದೆಹಲಿ ಸರ್ಕಾರದ ಸಹಕಾರದಲ್ಲಿ ಈ ವಿಶೇಷ ಯೋಜನೆಯನ್ನು ರೂಪಿಸಲಾಗುವುದು ಎಂದರು.

ದೆಹಲಿಯ ಅಕ್ಕಪಕ್ಕದ ರಾಜ್ಯಗಳಲ್ಲಿ ಭಾರಿ ಪ್ರಮಾಣದಲ್ಲಿ ಕೃಷಿ ತ್ಯಾಜ್ಯಗಳನ್ನು ಸುಡುತ್ತಿರುವುದು ವಾಯುಮಾಲಿನ್ಯಕ್ಕೆ ಕಾರಣವಾಗುತ್ತಿದ್ದು, ಈ ಕುರಿತು ರೈತರಲ್ಲಿ ಜಾಗೃತಿ ಮೂಡಿಸಬೇಕೆಂದು ಆರ್ಥಿಕ ಸಮೀಕ್ಷೆಯಲ್ಲಿ ಹೇಳಲಾಗಿತ್ತು.

ADVERTISEMENT

ಅಧಿಕಾರಿಗಳ ತರಬೇತಿಗಾಗಿ ₹ 192 ಕೋಟಿ ನಿಗದಿ: ಸರ್ಕಾರಿ ಅಧಿಕಾರಿಗಳಿಗೆ ದೇಶ ಹಾಗೂ ವಿದೇಶದಲ್ಲಿ ತರಬೇತಿ ಹಾಗೂ ಈಗಿರುವ ತರಬೇತಿ ಕೇಂದ್ರಗಳ ಅಗತ್ಯ ಮೂಲಸೌಕರ್ಯ ಒದಗಿಸಲು ₹192 ಕೋಟಿ ಅನುದಾನ ನೀಡಲಾಗಿದೆ.

ದೆಹಲಿಯಲ್ಲಿರುವ ಸಚಿವಾಲಯ ಸಿಬ್ಬಂದಿ ತರಬೇತಿ ಮತ್ತು ಆಡಳಿತ ನಿರ್ವಹಣಾ ಸಂಸ್ಥೆಹಾಗೂ ಮಸ್ಸೂರಿಯಲ್ಲಿರುವ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಆಡಳಿತ ಅಕಾಡೆಮಿ ಸಂಸ್ಥೆ (ಎಲ್‌ಬಿಎಸ್‌ಎನ್‌ಎಎ) ಸಂಸ್ಥೆಗೆ ₹75.32 ಕೋಟಿ ಅನುದಾನ ನೀಡಲಾಗಿದೆ.

ಐಎಸ್‌ಟಿಎಂ ಹಾಗೂ ಎಲ್‌ಬಿಎಸ್‌ಎನ್‌ಎಎ ಸಂಸ್ಥೆಗಳಲ್ಲಿ ಐಎಎಸ್‌ ಸೇರಿದಂತೆ ಅತ್ಯುನ್ನತ ವರ್ಗದ ಅಧಿಕಾರಿಗಳು ಹಾಗೂ ಸಚಿವಾಲಯದ ಸಿಬ್ಬಂದಿಗೆ ತರಬೇತಿ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.