ADVERTISEMENT

ಬಿಟ್‌ಕಾಯಿನ್‌ ಬಳಕೆಗೆ ನಿಷೇಧ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 20:02 IST
Last Updated 1 ಫೆಬ್ರುವರಿ 2018, 20:02 IST
ಬಿಟ್‌ಕಾಯಿನ್‌ ಬಳಕೆಗೆ ನಿಷೇಧ
ಬಿಟ್‌ಕಾಯಿನ್‌ ಬಳಕೆಗೆ ನಿಷೇಧ   

ನವದೆಹಲಿ (ಪಿಟಿಐ): ಬಿಟ್‌ ಕಾಯಿನ್‌ ಒಳಗೊಂಡು ಎಲ್ಲಾ ರೀತಿಯ ಕ್ರಿಪ್ಟೊ ಕರೆನ್ಸಿಗಳ ವಹಿವಾಟಿಗೆ ಕಾನೂನು ಮಾನ್ಯತೆ ಇಲ್ಲ. ಬಳಕೆಯನ್ನು
ಸಂಪೂರ್ಣ ನಿಷೇಧಿಸಲಾಗುವುದು ಎಂದು ಕೇಂದ್ರ ಸರ್ಕಾರ ಸ್ಪ‍ಷ್ಟ ನಿರ್ಧಾರ ಪ್ರಕಟಿಸಿದೆ.

ದೇಶದಲ್ಲಿ ಬಿಟ್‌ಕಾಯಿನ್‌ಗಳನ್ನು ವಿನಿಮಯ ಮಾಧ್ಯಮವಾಗಿ ಗುರುತಿಸಲಾಗುತ್ತಿಲ್ಲ. ಅದೊಂದು ನಿಯಂತ್ರಣರಹಿತ ಡಿಜಿಜಲ್‌ ಹಣ. ದೇಶದಲ್ಲಿ ಅದಕ್ಕೆ ಕಾನೂನು ಮಾನ್ಯತೆ ಇಲ್ಲ. ಯಾವುದೇ ಸಂಸ್ಥೆ ಅಥವಾ ಕಂಪನಿಗಳಿಗೆ ಇಂತಹ ಕರೆನ್ಸಿಗಳ ವಹಿವಾಟು ನಡೆಸಲು ಆರ್‌ಬಿಐ ಅನುಮತಿ ನೀಡಿಲ್ಲ ಎಂದು ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.

ವರದಿ ಪರಿಶೀಲನೆ: ಆರ್ಥಿಕ ವ್ಯವಹಾರಗಳ ಸಚಿವಾಲಯ, ಹಣಕಾಸು ಸೇವೆಗಳ ಸಚಿವಾಲಯ, ಗೃಹ ಸಚಿವಾಲಯ, ಆರ್‌ಬಿಐ, ನೀತಿ ಆಯೋಗ ಮತ್ತು ಎಸ್‌ಬಿಐನ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯು ಕ್ರಿಪ್ಟೊ ಕರೆನ್ಸಿಗಳ ಬಗ್ಗೆ ವರದಿ ಸಲ್ಲಿಸಿದೆ. ಈ ವರದಿಯನ್ನು ಪರಿಶೀಲನೆ ನಡೆಸಲಾಗುತ್ತಿದೆ.

ADVERTISEMENT

ಹದಿನೇಳು ತಿಂಗಳ ಅವಧಿಯಲ್ಲಿ ₹ 22 ಸಾವಿರ ಕೋಟಿಗೂ ಹೆಚ್ಚಿನ ಮೊತ್ತದ ವಹಿವಾಟು ನಡೆದಿರುವುದು ರಾಷ್ಟ್ರವ್ಯಾಪಿ ಸಮೀಕ್ಷೆ ಮೂಲಕ ತಿಳಿದು ಬಂದಿದೆ. ತಂತ್ರಜ್ಞಾನ ವ್ಯಾಮೋಹಿ ಯುವ ಹೂಡಿಕೆದಾರರು, ರಿಯಲ್‌ ಎಸ್ಟೇಟ್‌ ವಹಿವಾಟುದಾರರು ಮತ್ತು ಚಿನ್ನಾಭರಣ ವರ್ತಕರು ಬಿಟ್‌ಕಾಯಿನ್‌ ಸೇರಿದಂತೆ ಇತರ ಪರ್ಯಾಯ ಕರೆನ್ಸಿಗಳಲ್ಲಿ ಹಣ ತೊಡಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.