ADVERTISEMENT

ಮುದ್ರಾ: 3 ಲಕ್ಷ ಕೋಟಿ ಸಾಲ ನೀಡುವ ಗುರಿ

ಪಿಟಿಐ
Published 1 ಫೆಬ್ರುವರಿ 2018, 19:30 IST
Last Updated 1 ಫೆಬ್ರುವರಿ 2018, 19:30 IST

ನವದೆಹಲಿ (ಪಿಟಿಐ): ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ, ಸ್ವ ಉದ್ಯೋಗಿಗಳಿಗೆ 2018–19ರಲ್ಲಿ ₹ 3 ಲಕ್ಷ ಕೋಟಿ ಸಾಲ ನೀಡಿಕೆ ಗುರಿ ನಿಗದಿಪಡಿಸಲಾಗಿದೆ.

₹20 ಸಾವಿರ ಕೋಟಿ ಮೂಲ ಬಂಡವಾಳ ದೊಂದಿಗೆ 2015ರಲ್ಲಿ ಮುದ್ರಾ ಯೋಜನೆಗೆ ಚಾಲನೆ ನೀಡಲಾಗಿದ್ದು, ಪ್ರತಿ ವರ್ಷವೂ ನಿರೀಕ್ಷೆಗಿಂತಲೂ ಹೆಚ್ಚು ಸಾಲ ನೀಡಲಾಗಿದೆ.

ದೇಶದಲ್ಲಿರುವ ಸಣ್ಣ, ಅತಿ ಸಣ್ಣ ಉದ್ಯಮಗಳಿಗೆ (ಎಂಎಸ್‌ಎಂಇ) ಹಣಕಾಸು ನೆರವು ನೀಡುವ ಉದ್ದೇಶದಿಂದ ಪ್ರಧಾನ ಮಂತ್ರಿ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಮರು ಹಣಕಾಸು ಸಂಸ್ಥೆ ಮುದ್ರಾ ಲಿಮಿಟೆಡ್‌ ಸ್ಥಾಪಿಸಲಾಯಿತು. ನಂತರ ಮುದ್ರಾ ಬ್ಯಾಂಕ್‌ ಆಗಿ ಪರಿವರ್ತಿಸಲಾಯಿತು. ಸದ್ಯ, ‘ಭಾರತೀಯ ಮುದ್ರಾ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್‌ ಆಗಿ (ಎಸ್‌ಐಡಿಬಿಐ)  ಕಾರ್ಯನಿರ್ವಹಿಸುತ್ತಿದೆ.

ADVERTISEMENT

ಕೃಷಿಯೇತರ ಚುಟುವಟಿಕೆಗಳಿಗೆ ಮತ್ತು ಕೃಷಿಗೆ ಸಂಬಂಧಿಸಿದ ಅಂದರೆ ಡೇರಿ, ಕುಕ್ಕುಟೋದ್ಯಮಕ್ಕೆ ₹10 ಲಕ್ಷದವರೆಗೆ ಸಾಲ ಸೌಲಭ್ಯ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.