ADVERTISEMENT

ಸಿದ್ಧ ಉಡುಪು ಮಾರಾಟ ಅಂಗಡಿ ಸೇರಿ ಐದು ಮಳಿಗೆಗಳಿಗೆ ಬೆಂಕಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2018, 9:45 IST
Last Updated 4 ಫೆಬ್ರುವರಿ 2018, 9:45 IST
ಚಿತ್ರ: ಎಎನ್‌ಐ ಟ್ವೀಟ್
ಚಿತ್ರ: ಎಎನ್‌ಐ ಟ್ವೀಟ್   

ಕೊಟಕ್‌: ಒಡಿಶಾದ ಕೊಟಕ್‌ ನಗರದಲ್ಲಿ ಭಾನುವಾರ ಬಟ್ಟೆ ಅಂಗಡಿಗೆ ಬೆಂಕಿ ಹೊತ್ತಿಕೊಂಡು ಅಕ್ಕ ಪಕ್ಕದ ಐದು ಅಂಗಡಿಗೆ ವ್ಯಾಪಿಸಿದೆ.

ನಗರದ ಸಿದ್ಧ ಉಡುಪು ಮಾರಾಟ ಮಳಿಗೆಯೊಂದಕ್ಕೆ ಬೆಂಕಿ ಬಿದ್ದಿದ್ದು, ಅದರ ಜ್ವಾಲೆ ಪಕ್ಕದ ಅಂಗಡಿಗಳಿಗೂ ಹಬ್ಬಿದೆ. ಅಂಗಡಿಯಲ್ಲಿದ್ದ ವಸ್ತುಗಳು ಸಂಪೂರ್ಣ ಭಸ್ಮವಾಗಿವೆ.

ಅಗ್ನಿ ಶಾಮಕ ದಳದ ಏಳು ವಾಹನಗಳು ಸ್ಥಳಕ್ಕಾಗಮಿಸಿದ್ದು, ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ತೊಡಗಿದ್ದಾರೆ.

ADVERTISEMENT

ಹಾನಿಯ ಮೊತ್ತ ಹಾಗೂ ಜನರಿಗೆ ತೊಂದರೆಯಾಗಿರುವ ಬಗ್ಗೆ ಮತ್ತು ಘಟನೆಗೆ ಕಾರಣ ಏನೆಂಬುದು ವರದಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.